ದೂರುಗಳನ್ನು ಸ್ವೀಕರಿಸುವ ವ್ಯವಸ್ಥೆ
- ಸೇವಾ ಸೌಲಭ್ಯವನ್ನು ಪಡೆಯುವ ಬಳಕೆದಾರರು ಆಸ್ಪತ್ರೆಯ ಗುಣಮಟ್ಟ ಮತ್ತು ಸೇವೆಗಳ ಬಗ್ಗೆ, ದೂರುಗಳನ್ನು ಆಯಾ ಆಸ್ಪತ್ರೆಗಳಿಗೆ ಸಂಬಂಧಪಟ್ಟಂತೆ ಈ ಕೆಳಕಂಡ ಅಧಿಕಾರಿಗಳಲ್ಲಿ ಸಲ್ಲಿಸಬಹುದು. ಎಲ್ಲಾ ಆಸ್ಪತ್ರೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಹೆಸರು ಹಾಗೂ
ದೂರವಾಣಿ ಸಂಖ್ಯೆಗಳನ್ನು ಹೊರರೋಗಿ ವಿಭಾಗದಲ್ಲಿ ಪ್ರದರ್ಶಿಸಲಾಗಿದೆ.
- ದೂರುಗಳನ್ನು 24 ಗಂಟೆಗಳ ಒಳಗೆ ಪರಿಶೀಲಿಸದಿದ್ದಲ್ಲಿ ಆಸ್ಪತ್ರೆಯ ವೈಧ್ಯಾಧಿಕಾರಿಯವರಿಗೆ ಸಲ್ಲಿಸಬಹುದು
- ದೂರುಗಳನ್ನು 48 ಗಂಟೆಗಳ ಒಳಗೆ ಪರಿಶೀಲಿಸದಿದ್ದಲ್ಲಿ ವಿಭಾಗದ ವೈದ್ಯಕೀಯ ಅಧೀಕ್ಷಕರಿಗೆ ಸಲ್ಲಿಸಬಹುದು
- ದೂರುಗಳನ್ನು 4 ದಿನಗಳ ಒಳಗೆ ಪರಿಶೀಲಿಸದಿದ್ದಲ್ಲಿ ವಲಯ ಅರೋಗ್ಯ ಅಧಿಕಾರಿ (ಕ್ಲಿನಿಕಲ್) ರವರಿಗೆ ಸಲ್ಲಿಸಬಹುದು
- ಆರೋಗ್ಯ ಅಧಿಕಾರಿಯ ದೂರವಾಣಿ ಸಂಖ್ಯೆ (ಕ್ಲಿನಿಕಲ್ ಪೂರ್ವ) 080-22120955
- ಆರೋಗ್ಯ ಅಧಿಕಾರಿಯ ದೂರವಾಣಿ ಸಂಖ್ಯೆ (ಕ್ಲಿನಿಕಲ್ ಪಶ್ಚಿಮ) 080-22975656
- ಆರೋಗ್ಯ ಅಧಿಕಾರಿಯ ದೂರವಾಣಿ ಸಂಖ್ಯೆ (ಕ್ಲಿನಿಕಲ್ ದಕ್ಷಿಣ) 080-22975855 ರವರನ್ನು ಸಹ ಸಂಪರ್ಕಿಸಬಹುದು
- ದೂರುಗಳನ್ನು 7 ದಿನಗಳ ಒಳಗೆ ಪರಿಶೀಲಿಸದಿದ್ದಲ್ಲಿ ಅಥವಾ ತುರ್ತು ಸಂದರ್ಭದಲ್ಲಿ , ಮುಖ್ಯ ಅರೋಗ್ಯ ಅಧಿಕಾರಿ (ಕ್ಲಿನಿಕಲ್) ರವರಿಗೆ ಸಲ್ಲಿಸಬಹುದು ಹಾಗೂ ದೂರವಾಣಿ ಸಂಖ್ಯೆ 080-22112019 ರವರನ್ನು ಸಂಪರ್ಕಿಸಬಹುದು
- ವಿಶೇಷ ಆಯುಕ್ತರು (ಅರೋಗ್ಯ) ಬಿಬಿಎಂಪಿ ದೂರವಾಣಿ ಸಂಖ್ಯೆ 080-22975551 ರವರನ್ನು ಸಂಪರ್ಕಿಸಬಹುದು
- ಎಲ್ಲಾ ಆಸ್ಪತ್ರೆಗಳಲ್ಲಿ ದೂರು ಪಟ್ಟಿಗಳನ್ನು ಅಳವಡಿಸಿದ್ದು, ದೂರುಗಳನ್ನು ಸಲ್ಲಿಸಬಹುದಾಗಿರುತ್ತದೆ
- ಸೇವಾ ಸೌಲಭ್ಯವನ್ನು ಪಡೆಯುವ ಬಳಕೆದಾರರು 104 ಅರೋಗ್ಯ ಸಹಾಯವಾಣಿಯಲ್ಲಿಯೂ ದೂರುಗಳನ್ನು ಸಲ್ಲಿಸಬಹುದು
- ಪಾಲಿಕೆ ವತಿಯಿಂದ ಸಿದ್ಧಪಡಿಸಿರುವ ಸಹಾಯ ಅಪ್ಲಿಕೇಶನ್ ಮುಖಾಂತರ ದೂರುಗಳನ್ನು ಸಲ್ಲಿಸಬಹುದು