ಪಾಲಿಕೆ ಆಸ್ಪತ್ರೆಗಳಲ್ಲಿ ಸೇವಾ ಬಳಕೆ
- ಹೊಸಹಳ್ಳಿ ರೆಫೆರಲ್ ಆಸ್ಪತ್ರೆ ಮತ್ತು ಸಿದ್ದಯ್ಯ ಆಸ್ಪತ್ರೆಗಳನ್ನು ಉದರ ದರ್ಶಕ ಶಸ್ತ್ರ ಚಿಕಿತ್ಸೆಯ ತರಬೇತಿ ಕೇಂದ್ರಗಳಾಗಿ ರಾಜ್ಯ ಸರ್ಕಾರದಿಂದ ನೋಂದಾಯಿಸಲ್ಪಟ್ಟಿದ್ದು , ಅರೋಗ್ಯ ಇಲಾಖೆಯ ವೈದ್ಯರು ಹಾಗು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ತರಬೇತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ.
- ಬನಶಂಕರಿ ರೆಫೆರಲ್ ಆಸ್ಪತ್ರೆ, ಜೆ ಜೆ ಆರ್ ನಗರ ಆಸ್ಪತ್ರೆಗಳು MTP ಮತ್ತು IUCD ತರಬೇತಿ ಕೇಂದ್ರಗಳಾಗಿವೆ
- ಪಾಲಿಕೆಯ ಆಸ್ಪತ್ರೆಗಳಲ್ಲಿ ಲಭ್ಯವಿರುವ ಕ್ಲಿನಿಕಲ್ ಸೇವೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಯವರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ
- ಎಂ ಎಸ್ ರಾಮಯ್ಯ ಆಸ್ಪತ್ರೆಯ ಇಂಟರ್ನ್ಸ್ ಗಳಿಗೆ ಶ್ರೀರಾಂಪುರ ರೆಫೆರಲ್ ಆಸ್ಪತ್ರೆಯಲ್ಲಿ ತರಬೇತಿ
- ಡಾ. ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಇಂಟರ್ನ್ಸ್ ಗಳಿಗೆ ಗಂಗಾನಗರ ಹೆರಿಗೆ ಆಸ್ಪತ್ರೆಯಲ್ಲಿ ಹಾಗು ಡಿ ಜೆ ಹಳ್ಳಿ ಹೆರಿಗೆ ಆಸ್ಪತ್ರೆಯಲ್ಲಿ ತರಬೇತಿ
- ಮಹಾವೀರ ಜೈನ್ ಆಸ್ಪತ್ರೆ DNB ವಿದ್ಯಾರ್ಥಿಗಳಿಗೆ ಹಲಸೂರು ರೆಫೆರಲ್ ಆಸ್ಪತ್ರೆಯಲ್ಲಿ ತರಬೇತಿ
- ಕೆಂಪೇಗೌಡ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಬನಶಂಕರಿ ರೆಫರಲ್ ಆಸ್ಪತ್ರೆಯಲ್ಲಿ ತರಬೇತಿ
- ಸೇಂಟ್ ಫಿಲೋಮಿನಾ ಆಸ್ಪತ್ರೆಯ ವಿದ್ಯಾರ್ಥಿಗಳಿಗೆ ಆಸ್ಟಿನ್ ಟೌನ್ ಹೆರಿಗೆ ಆಸ್ಪತ್ರೆಯಲ್ಲಿ ತರಬೇತಿ.
- ಮಂಗಳೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ 'ಎಚ್.ಸಿದ್ದಯ್ಯ ರಸ್ತೆ' ಕುಟುಂಬ ಕಲ್ಯಾಣ ಕೇಂದ್ರದಲ್ಲಿ ತರಬೇತಿ
- ಸಂತೋಷ್ ಆಸ್ಪತ್ರೆಯ ಡಿಎನ್‌ಬಿ ವಿದ್ಯಾರ್ಥಿಗಳಿಗೆ ಶ್ರೀರಾಂಪುರ ರೆಫರಲ್ ಆಸ್ಪತ್ರೆಯಲ್ಲಿ ತರಬೇತಿ
- ಕಾಲೇಜು, ಕ್ರಿಸ್ಟಿಯನ್ ನರ್ಸಿಂಗ್ ಕಾಲೇಜು, ಇತರೆ ಕಾಲೇಜೆನ ನರ್ಸಿಂಗ್ ವಿದ್ಯಾರ್ಥಿಗಳಿಗೆ ತರಬೇತಿ
ಆರೋಗ್ಯ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳ ವಿವರಗಳು
ಕ್ರಮ ಸಂಖ್ಯೆ | ಹುದ್ದೆ | ಪೂರ್ವ | ಪಶ್ಚಿಮ | ದಕ್ಷಿಣ | ಮುಖ್ಯ ಆರೋಗ್ಯಾಧಿಕಾರಿ | ಒಟ್ಟು | ಕಾರ್ಯ ನಿರ್ವಹಿಸುತ್ತಿರುವವರು | ಖಾಲಿ |
---|---|---|---|---|---|---|---|---|
1 | ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) | 0 | 0 | 0 | 1 | 1 | 1 | 0 |
2 | ಆರೋಗ್ಯ ಅಧಿಕಾರಿ (ಕ್ಲಿನಿಕಲ್) | 1 | 1 | 1 | 3 | 3 | 1 | 0 |
3 | ವೈದ್ಯಕೀಯ ಅಧೀಕ್ಷಕರು | 1 | 3 | 2 | 0 | 6 | 6 | 0 |
4 | ಪ್ರಸೂತಿ ತಜ್ಞರು | 5 | 15 | 9 | 0 | 29 | 10 | 19 |
5 | ಮಕ್ಕಳ ತಜ್ಞರು | 3 | 9 | 6 | 0 | 18 | 8 | 10 |
6 | ಅರವಳಿಕೆ ತಜ್ಞರು | 3 | 9 | 6 | 0 | 18 | 6 | 12 |
7 | ಸಹಾಯಕ ಶಸ್ತ್ರ ಚಿಕಿತ್ಸಕರು | 7 | 11 | 14 | 0 | 32 | 7 | 25 |
8 | ಶುಶ್ರೂಷಕಿಯರು | 21 | 25 | 33 | 0 | 79 | 57 | 22 |
9 | ಪ್ರಯೋಗಾಲಯ ತಂತ್ರಜ್ಞರು | 3 | 11 | 7 | 0 | 21 | 18 | 3 |
10 | ಔಷಧಜ್ಞಾನಿ (ಫಾರ್ಮಸಿಸ್ಟ್) | 1 | 2 | 1 | 0 | 4 | 2 | 2 |