ಆಸ್ಪತ್ರೆಗಳಲ್ಲಿ ನಡೆಸುತ್ತಿರುವ ಅರೋಗ್ಯ ಕಾರ್ಯಕ್ರಮಗಳ ವಿವರ
- ಮಡಿಲು ಕಾರ್ಯಕ್ರಮದ ಅಡಿಯಲ್ಲಿ ಪಾಲಿಕೆ ವತಿಯಿಂದ ಜೂಲೈ 2017 ರಿಂದ ಮಡಿಲು ಕಿಟ್ ಗಳನ್ನು ಹುಟ್ಟಿದ ಮಗುವಿಗೆ ( ಮೊದಲ 2 ಜೀವಂತ ಮಕ್ಕಳಿಗೆ ಮಾತ್ರ) ವಿತರಣೆ
- ಜನನಿ ಸುರಕ್ಷಾ ಯೋಜನೆಯಡಿಯಲ್ಲಿ ಹೆರಿಗೆಯಾದ ಎಸ್ಸಿ, ಎಸ್ಟಿ ಮತ್ತು ಬಿಪಿಎಲ್ ಮಹಿಳೆಯರಿಗೆ ರೂ. 600 ವಿತರಣೆ
- ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಪ್ರೋತ್ಸಾಹ ಧನ ರೂ. 600 ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ, ರೂ. 250 ಮತ್ತು ಇತರರಿಗೆ ರೂ.1100 ವ್ಯಾಸೆಕ್ಟಮಿ ಫಲಾನುಭವಿಗಳಿಗೆ
- ಜನನಿ ಶಿಶು ಸುರಕ್ಷಾ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಗರ್ಭಿಣಿ ಸ್ತ್ರೀ ಮತ್ತು ನವಜಾತ ಶಿಶುವಿಗೆ ಪ್ರಸೂತಿ ಪೂರ್ವ, ಪ್ರಸೂತಿ, ಪ್ರಸೂತಿ ನಂತರ ಹಾಗೂ ನವಜಾತ ಶಿಶುವಿಗೆ ಒಂದು ವರ್ಷದ ವರೆಗೆ ಉಚಿತ ಔಷಧಿ, ಲ್ಯಾಬ್, ಊಟ ಹಾಗು ಸಾರಿಗೆ ವ್ಯವಸ್ಥೆ
- ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನದಲ್ಲಿ ಪ್ರತಿ ತಿಂಗಳ 9 ರಂದು ಗರ್ಭಿಣಿ ಸ್ತ್ರೀಯ ತಪಾಸಣೆ ಹಾಗೂ ಹೈ ರಿಸ್ಕ್ ಪ್ರೆಗ್ನನ್ಸಿ ಸ್ಕ್ರೀನಿಂಗ್
- ಆಯುಷ್ಮಾನ್ ಭಾರತ್-ಅರೋಗ್ಯ ಕರ್ನಾಟಕದ ಅಡಿಯಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನು ನೀಡುವುದು