ಆಸ್ತಿ ಇಲಾಖೆಯಲ್ಲಿ ನಿರ್ವಹಿಸಲಾಗುವ ಮುಖ್ಯ ಕೆಲಸ ಕಾರ್ಯಗಳು:



  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಆಸ್ತಿ ವಿಭಾಗವು ಒಂದು ಪ್ರಮುಖ ಇಲಾಖೆ ಯಾಗಿದ್ದು, ಪಾಲಿಕೆಯ ಆಸ್ತಿಗಳ ನಿರ್ವಹಣೆ ಸಂಬಂಧವಾಗಿ ವಲಯ ಅಪರ/ಜಂಟಿ ಆಯುಕ್ತರುಗಳ ಉಸ್ತುವಾರಿಯಲ್ಲಿ ಸಂಬಂಧಪಟ್ಟ ಕಂದಾಯ ಇಲಾಖೆ, ಕಾಮಗಾರಿ ಇಲಾಖೆ, ತೋಟಗಾರಿಕೆ ಇಲಾಖೆಯವರೊಡನೆ ತಪಾಸಣೆ ನಡೆಸಿ, ಹೊಸದಾಗಿ ಸೇರ್ಪಡೆಯಾಗುವ ಹಾಗೂ ಬಿಟ್ಟುಹೋಗಿರುವ ಆಸ್ತಿಗಳನ್ನು ಗುರುತಿಸಿ, ಭೂಮಾಪಕರಿಂದ ಸದರಿ ಆಸ್ತಿ ಬಗ್ಗೆ ಮೋಜಿಣಿಪಡಿಸಿ ನಕ್ಷೆಯನ್ನು ತಯಾರಿಸಿ, ಆಸ್ತಿ ವಹಿಯಲ್ಲಿ ದಾಖಲಿಸಿ ದೃಢೀಕರಿಸಿ ಆಸ್ತಿಯನ್ನು ಸಂರಕ್ಷಿಸುವ ಕ್ರಮಕೈಗೊಳ್ಳಲಾಗುವುದು.


  • ವಲಯ ಅಪರ/ಜಂಟಿ ಆಯುಕ್ತರುಗಳ ಹಾಗೂ ಕಾಮಗಾರಿ ವಿಭಾಗದ ಉಸ್ತುವಾರಿಯಲ್ಲಿ ಪಾಲಿಕೆಯ ಆಸ್ತಿಗಳನ್ನು ದಾಖಲಿಸಿ, ಸಂರಕ್ಷಿಸಿ, ಅತಿಕ್ರಮಣ ಮತ್ತು ಅನಧಿಕೃತ ಒತ್ತುವರಿ ತಡೆಯುವ ಮತ್ತು ತೆರವುಗೊಳಿಸುವ ಕ್ರಮಗಳಿಗೆ ಸಹಕರಿಸುವುದು.
  • ಆಸ್ತಿಗಳನ್ನು ಸಂರಕ್ಷಿಸುವ ಸಲುವಾಗಿ ತಂತಿಬೇಲಿಯನ್ನು ಅಳವಡಿಸುವುದಕ್ಕೆ ತಾಂತ್ರಿಕ ವಿಭಾಗಕ್ಕೆ ಕ್ರಮವಹಿಸಲು ಸೂಚಿಸುವುದು.
  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ವತ್ತುಗಳನ್ನು ಸಾರ್ವಜನಿಕ ಸಂಘ-ಸಂಸ್ಥೆಗಳಿಗೆ/ವ್ಯಕ್ತಿಗಳಿಗೆ ಬಾಡಿಗೆ, ಗುತ್ತಿಗೆ ಅಥವಾ ಮಾರುಕಟ್ಟೆ ದರದಲ್ಲಿ ಪ್ರಯತ್ನ ನೀಡುವಲ್ಲಿ ವಲಯ ಅಪರ/ ಜಂಟಿ ಆಯುಕ್ತ ರಿಂದ ಬರುವ ಪ್ರಸ್ತಾವನೆಗಳನ್ನು ಸ್ಥಾಯಿ ಸಮಿತಿ ಮತ್ತು ಪಾಲಿಕೆ ಸಭೆಯ ತೀರ್ಮಾನಕ್ಕೆ ಮಂಡಿಸುವುದು ಮತ್ತು ಸರ್ಕಾರದ ಅನುಮೋದನೆಗೆ ಕಳುಹಿಸುವುದು. ಅಲ್ಲದೆ ಗುತ್ತಿಗೆಗೆ ನೀಡಲಾದ ಸ್ವತ್ತುಗಳ ಬಗ್ಗೆ ಮಾಹಿತಿಯನ್ನು ಗಣಕೀಕೃತಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಹಿತಿಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸುವ ಬಗ್ಗೆ ಕ್ರಮವಹಿಸುವುದು ಪಾಲಿಕೆಯ ಆಸ್ತಿಗಳನ್ನು ಗುತ್ತಿಗೆ/ಕೃಯ ನೀಡುವ ಬಗ್ಗೆ ನಿಯಮಾವಳಿಗಳ ಪ್ರಕಾರ, ಸರ್ಕಾರದ ಅನುಮೋದನೆ ಪಡೆಯುವ ಕುರಿತು ಕ್ರಮವಹಿಸುವುದು.
  • ಪಾಲಿಕೆಯ ಆಸ್ತಿಗಳನ್ನು ವರ್ಗೀಕರಿಸಿ ಗಣಕೀಕೃತ ಗೊಳಿಸುವ ಕಾರ್ಯ ನಿರ್ವಹಣೆ.
  • ಗಣಕಯಂತ್ರದ ಮೂಲಕ ಸ್ಕ್ಯಾನ್ ಮಾಡಿ ಭೌಗೋಳಿಕ ಮಾಹಿತಿ ಯೋಜನೆಗೆ ಸಂಪರ್ಕ ಕಲ್ಪಿಸುವುದು.