ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಆಸ್ತಿ ವಿಭಾಗವು ಒಂದು ಪ್ರಮುಖ ಇಲಾಖೆಯಾಗಿದ್ದು, ಪಾಲಿಕೆಯ ಆಸ್ತಿಗಳ ನಿರ್ವಹಣೆ ಸಂಬಂಧವಾಗಿ ವಲಯ ಅಪರ/ಜಂಟಿ ಆಯುಕ್ತರುಗಳ ಉಸ್ತುವಾರಿಯಲ್ಲಿ ಸಂಬಂಧಪಟ್ಟ ಕಂದಾಯ ಇಲಾಖೆ, ಕಾಮಗಾರಿ ಇಲಾಖೆ, ತೋಟಗಾರಿಕೆ ಇಲಾಖೆಯವರೊಡನೆ ತಪಾಸಣೆ ನಡೆಸಿ, ಹೊಸದಾಗಿ ಸೇರ್ಪಡೆಯಾಗುವ ಹಾಗೂ ಬಿಟ್ಟುಹೋಗಿರುವ ಆಸ್ತಿಗಳನ್ನು ಗುರುತಿಸಿ, ಭೂಮಾಪಕರಿಂದ ಸದರಿ ಆಸ್ತಿ ಬಗ್ಗೆ ಮೋಜಿಣಿಪಡಿಸಿ ನಕ್ಷೆಯನ್ನು ತಯಾರಿಸಿ, ಆಸ್ತಿ ವಹಿಯಲ್ಲಿ ದಾಖಲಿಸಿ ದೃಢೀಕರಿಸಿ ಆಸ್ತಿಯನ್ನು ಸಂರಕ್ಷಿಸುವ ಕ್ರಮಕೈಗೊಳ್ಳಲಾಗುವುದು.