ಸಾರ್ವಜನಿಕ ಸಂಪರ್ಕ ವಿಭಾಗದ ಧ್ಯೇಯ ಉದ್ದೇಶಗಳು



  • ಬೃಹತ್ ಬೆಂಗಳೂರು ಬೆಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕ ಸಂಪರ್ಕ ವಿಭಾಗವು ಒಂದು ಪ್ರಮುಖ ಅಂಗವಾಗಿ ಕೆಲಸ ನಿರ್ವಹಿಸುತ್ತದೆ. ಪಾಲಿಕೆಯಿಂದ ಹಮ್ಮಿಕೊಳ್ಳಲಾಗುವ ಪ್ರತಿಯೊಂದು ಸೇವೆ ಮತ್ತು ಯೋಜನೆಗಳ ಮಹತ್ವವನ್ನು ನಗರದ ನಾಗರಿಕರಿಗೆ ಮುಟ್ಟಿಸಿ ಅವರೊಂದಿಗೆ ಉತ್ತಮ ಬಾಂಧವ್ಯ ಏರ್ಪಡಿಸಿ ನಾಗರಿಕರಲ್ಲಿ ಸಂಸ್ಥೆ ಬಗ್ಗೆ ಗೌರವ ಹೆಚ್ಚಿಸುವ ರೀತಿಯಲ್ಲಿ ಕೆಲಸ ನಿರ್ವಹಿಸುವುದು.
  • ನಗರದ ನಾಗರಿಕ ಜೀವನ ಗುಣಮಟ್ಟವನ್ನು ಉತ್ತಮ ಪಡಿಸುವ ಉದ್ದೇಶದಿಂದ ಪಾಲಿಕೆಯಿಂದ ಒದಗಿಸಲಾಗುವ ಮೂಲಭೂತ ಸೌಕರ್ಯಗಳನ್ನು ನಾಗರಿಕರಿಗೆ ಪರಿಚಯಿಸುದಲ್ಲದೆ ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸಿ ನ್ಯೂನ್ಯತೆ ಗಳೇನಾದರೂ ಇದ್ದಲ್ಲಿ ಅವುಗಳ ವಿಶ್ಲೇಷಣೆ ಮತ್ತು ಮಾರ್ಪಾಡಿ ಗಾಗಿ ಮೇಲಾಧಿಕಾರಿಗಳ ಗಮನಕ್ಕೆ ತರುವುದು ಈ ವಿಭಾಗದ ಕಾರ್ಯವಾಗಿದೆ.
  • ಪಾಲಿಕೆಯು ಸಾರ್ವಜನಿಕರ ಒಳಿತಿಗಾಗಿ ಹಲವಾರು ರೀತಿಯಲ್ಲಿ ಶ್ರಮಿಸುತ್ತಿದೆ. ಸಾರ್ವಜನಿಕರು ಎದುರಿಸುವಂತಹ ಜಟಿಲ ಸಮಸ್ಯೆಗಳ ಪರಿಹಾರಕ್ಕಾಗಿಪಾಲಿಕೆಯು ಹಮ್ಮಿಕೊಳ್ಳುವ ಜನಜಾಗೃತಿ ಮುಂಬೈ ಕಾರ್ಯಕ್ರಮಗಳನ್ನು ನಾಗರಿಕರಿಗೆ ಪರಿಚಯಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತದೆ ಅದಲ್ಲದೆ ಮಳೆಗಾಲದಲ್ಲಿ ಪ್ರವಾಹದಿಂದ ಉಂಟಾಗುವ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಪಾಲಿಕೆಯಿಂದ ಕೈಗೊಳ್ಳುವ ಕ್ರಮಗಳು ಸಾರ್ವಜನಿಕರಿಗೆ ತಕ್ಷಣವೇ ಸಂಪರ್ಕಿಸಲಿಕೆ ವ್ಯವಸ್ಥೆ ಪೂರ್ವಭಾವಿ ಸಿದ್ಧತೆ ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು ಮುಂತಾದ ವಿಷಯಗಳನ್ನು ಸಾರ್ವಜನಿಕರಲ್ಲಿ ಪ್ರಚುರ ಪಡಿಸಲು ಮಹತ್ವದ ಪಾತ್ರವಹಿಸುತ್ತದೆ.
  • ಇತ್ತೀಚಿನ ದಿನಗಳಲ್ಲಿ ನಗರವು ಎದುರಿಸುತ್ತಿರುವ ಘನತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮೂಲದಲ್ಲಿಯೇ ಕಸವಿಂಗಡನೆ ಮಾಡಲು ಜನರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮಗಳ ಮೂಲಕ ಸಾಕಷ್ಟು ಪ್ರಚಾರ ಬಡಿಸುವುದು ಮಳೆಗಾಲದಲ್ಲಿ ಉದ್ಭವಿಸುವ ಅಂತಹ ಸಾಂಕ್ರಮಿಕ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಲು ಸಕಾಲದಲ್ಲಿ ತಿಳುವಳಿಕೆ ನೀಡಲು ಕ್ರಮ ಕೈಗೊಳ್ಳುತ್ತದೆ.
  • ಪ್ರತಿಯೊಂದು ಯೋಜನೆ ಯಶಸ್ವಿಯಾಗಬೇಕಾದರೆ ಸಂಪನ್ಮೂಲ ಕ್ರೂಢೀಕರಣ ಬಹಳ ಅವಶ್ಯಕವಾಗಿದೆನಾಗರಿಕರು ನಿಗದಿತ ಅವಧಿಯೊಳಗೆ ಪಾಲಿಕೆಗೆ ನೀಡಬೇಕಾದ ಆಸ್ತಿತೆರಿಗೆ ಉದ್ದಿಮೆತೆರಿಗೆ ಜಾಹಿರಾತು ತೆರಿಗೆ ಮುಂತಾದುವುಗಳ ಬಗ್ಗೆ ತಿಳುವಳಿಕೆ ನೀಡಿ ಅಭಿವೃದ್ಧಿ ಕೆಲಸಗಳನ್ನು ಸಹಯೋಗಿ ನೀಡುವಂತೆ ಪ್ರಚಾರ ಪಡಿಸುವುದು.
  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಂತಹ ಒಂದು ದೊಡ್ಡ ಸ್ಥಳೀಯ ಸಂಸ್ಥೆ ತ್ವರಿತಗತಿಯಲ್ಲಿ ಮತ್ತು ಗುಣಾತ್ಮಕವಾದ ರೀತಿಯಲ್ಲಿ ಜನರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ವಾತಾವರಣ ನಿರ್ಮಿಸುವುದು ನಾಗರಿಕರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಏರ್ಪಡಿಸಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸುವುದು ಸಾರ್ವಜನಿಕ ಸಂಪರ್ಕ ವಿಭಾಗದ ಉದ್ದೇಶವಾಗಿದೆ.


ಸಾರ್ವಜನಿಕ ಕುಂದುಕೊರತೆ



  • 800 ಚದರ ಕಿಲೋಮೀಟರ್ ನಷ್ಟು ವ್ಯಾಪ್ತಿ ಪ್ರದೇಶ ಹೊಂದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ವಾಸಿಸುವ ಎಲ್ಲಾ ನಾಗರಿಕ ಮೂಲ ಸೌಕರ್ಯಗಳ ನಿರ್ವಹಣೆ ಸಕಾಲದಲ್ಲಿ ಆಗದಿದ್ದರೆ ಹಲವಾರು ಸಮಸ್ಯೆಗಳು ಉದ್ಭವವಾಗುತ್ತವೆ. ಈ ಕುಂದುಕೊರತೆಗಳ ನಿವಾರಣೆಗಾಗಿ ಪಾಲಿಕೆ ಆಧುನಿಕ ಸೌಲಭ್ಯಗಳನ್ನು ಹೊಂದಿರುವಂತಹ ನಿಯಂತ್ರಣ ಕೊಠಡಿ ಸ್ಥಾಪಿಸಿದೆ ಸಾರ್ವಜನಿಕರು ಪಾಲಿಕೆ ನಿಯಂತ್ರಣ ಕೊಠಡಿಗೆ ದೂರು ನೀಡ ನೀಡಬಹುದಾಗಿದೆ.
  • ನಿಯಂತ್ರಣ ಕೊಠಡಿ 24/7 ಕಾಲ ಕೆಲಸ ನಿರ್ವಹಿಸುತ್ತದೆ.
  • ಕಸವಿಲೇವಾರಿ, ರಸ್ತೆಗುಂಡಿ, ಬೀದಿದೀಪ, ಅನಧಿಕೃತ ಕಟ್ಟಡ ನಿರ್ಮಾಣ, ಅಪಾಯಕಾರಿ ಮರಗಳನ್ನು ತೆರವುಗೊಳಿಸುವುದು, ರಸ್ತೆಬದಿ ಮೋರಿಗಳನ್ನು ಸ್ವಚ್ಛಗೊಳಿಸುವುದು, ಸತ್ತ ಪ್ರಾಣಿಗಳನ್ನು ತೆರವುಗೊಳಿಸುವುದು ಹೀಗೆ ಮುಂತಾದ ದೂರುಗಳನ್ನು ನಿಯಂತ್ರಣ ಕೊಠಡಿ ದೂರವಾಣಿ 22660000 ಸಂಖ್ಯೆಗೆ ದೂರು ನೀಡಬಹುದಾಗಿದೆ
  • ಸಾರ್ವಜನಿಕರು ದೂರು ದಾಖಲಿಸಿದ ಕೂಡಲೇ ದೂರುದಾರರಿಗೆ ದೂರಿನಸಂಖ್ಯೆ ನೀಡಲಾಗುವುದು.
  • ತಕ್ಷಣವೇ ವೈರ್ಲೆಸ್ ಮುಖಾಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕ್ರಮಕೈಗೊಳ್ಳಲಾಗುವುದು.
  • ಕ್ರಮ ಕೈಗೊಂಡಿರುವ ಬಗ್ಗೆ ದೂರುದಾರರಿಗೆ ಮಾಹಿತಿ ನೀಡುವಂತಹ ವ್ಯವಸ್ಥೆ ಕಲ್ಪಿಸಲಾಗಿದೆ.
  • ಪತ್ರಿಕೆಗಳಲ್ಲಿ ಪ್ರಕಟಗೊಂಡ ದೂರುಗಳ ಬಗ್ಗೆ ಕೂಡ ಪಾಲಿಕೆ ನಿಯಂತ್ರಣ ಕೊಠಡಿಯಲ್ಲಿ ವಿವರಗಳನ್ನು ದಾಖಲಿಸುವುದು ಮತ್ತು ಪತ್ರಿಕೆ ತುಣುಕುಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಟಿಪ್ಪಣಿಯನ್ನು ಕಳುಹಿಸಿ ಕ್ರಮ ಕೈಗೊಂಡು ವರದಿ ನೀಡಲು ಸೂಚಿಸಲಾಗುವುದು.
  • ಕ್ರಮಕೈಗೊಂಡ ವರದಿ ಬಂದ ನಂತರ ಪತ್ರಿಕೆಗಳಿಗೆ ವರದಿ ನೀಡಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲು ಕೋರಲಾಗುತ್ತದೆ.
  • ಸಾರ್ವಜನಿಕರು ಪ್ರತಿದಿನ ಕಸವನ್ನು ಮನೆ ಹತ್ತಿರ ಬರುವ ಗಾಡಿಗೆ ನೀಡುವ ಬದಲು ರಸ್ತೆ ಮೇಲೆ ಕಸ ಎಸೆಯುವುದನ್ನು ಕಂಡುಬಂದಲ್ಲಿ ತಕ್ಷಣವೇ ಮೊಬೈಲ್ನಲ್ಲಿ ಛಾಯಾಚಿತ್ರ ತೆಗೆದು ವಾಟ್ಸಾಪ್ನಲ್ಲಿ ದೂರವಾಣಿ ಸಂಖ್ಯೆಗೆ 9480685700 ಕಳುಹಿಸಿದಲ್ಲಿ ಅಂತಹ ವ್ಯಕ್ತಿಗಳ ಮೇಲೆ ದಂಡ ವಿಧಿಸಲಾಗುವುದು