ಪರಿಚಯ


  • ವಿವಿಧ ನಾಗರೀಕ ಸೇವೆಗಳು, ಸೌಕರ್ಯಗಳು ಮತ್ತು ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪ್ರಕಟಿಸುವುದು ಈ ಇಲಾಖೆಯ ಮಹತ್ವದ ಕೆಲಸವಾಗಿದೆ. ಇಲಾಖೆಯು ವಿವಿಧ ನಾಗರೀಕ ಕಾರ್ಯಗಳಿಗೆ ವ್ಯವಸ್ಥೆಗಳನ್ನು ಮಾಡುತ್ತದೆ, ಪುರಸಭೆಯ ಕಾರ್ಯಕ್ರಮಗಳಲ್ಲಿ ಗಮನಿಸಬೇಕಾದ ಕಾರ್ಯಗಳು ಮತ್ತು ಪ್ರೋಟೋಕಾಲ್ ಬಗ್ಗೆ ಇತರ ಇಲಾಖೆಗಳಿಗೆ ಮಾರ್ಗದರ್ಶನ ನೀಡುತ್ತದೆ. ಸಾರ್ವಜನಿಕ ಆರೋಗ್ಯ, ರೋಗನಿರೋಧಕ ಶಕ್ತಿ, ಶಿಕ್ಷಣ ಮತ್ತು ಇತರ ನಾಗರೀಕ ವಿಷಯಗಳ ಸಂಬಂಧಿತ ಅಭಿಯಾನದ ನಿಗಮದಲ್ಲಿನ ಇಂತಹ ಎಲ್ಲಾ ಕಾರ್ಯಗಳು ಮತ್ತು ಘಟನೆಗಳಿಗೆ ಪ್ರಚಾರವನ್ನು ನೀಡಲಾಗುತ್ತದೆ. ಈ ಇಲಾಖೆಯು ವಿವಿಧ ನಾಗರೀಕ ಸೌಲಭ್ಯಗಳು ಮತ್ತು ಸಮಸ್ಯೆಗಳ ಕುರಿತು ನಿಯಮಿತ ಪ್ರಚಾರವನ್ನು ಕೈಗೊಳ್ಳುತ್ತದೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ಮತ್ತು ಕೊಳೆಗೇರಿಗಳು ಮತ್ತು ಇತರ ಪ್ರದೇಶಗಳಲ್ಲಿ ಸ್ವಚ್ಛತೆ, ನೀರಿನ ಕೊರತೆ, ಮಾನ್ಸೂನ್ ಪ್ರವಾಹ, ಎಸ್ ಡಬ್ಲ್ಯೂ ಎಂ, ಎಸ್ ಡಬ್ಲ್ಯೂ ಡಿ, ಶಿಥಿಲಗೊಂಡ ಕಟ್ಟಡಗಳು, ಭೂ ಜಾರುವಿಕೆ ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸುತ್ತದೆ.

ಕಾರ್ಯಗಳು ಮತ್ತು ಕರ್ತವ್ಯಗಳು



  • ಸಾರ್ವಜನಿಕ ಸಂಪರ್ಕ ವಿಭಾಗವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವೆಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತದೆ. ಪ್ರತಿನಿತ್ಯ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಸಾರ್ವಜನಿಕರು ದೂರುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪಾಲಿಕೆಗೆ ಸಂಬಂಧಿಸಿದ ವಿಷಯಗಳನ್ನೊಳಗೊಂಡ ತುಣುಕುಗಳನ್ನು ಪ್ರತಿನಿತ್ಯವೂ ಕತ್ತರಿಸಿ, ಕೇಂದ್ರ ಕಛೇರಿಯ ಕಚೇರಿಗಳಿಗೆ ರವಾನಿಸುವುದು. ಪತ್ರಿಕೆಗಳಿಗೆ ಜಾಹೀರಾತು ನೀಡುವುದು, ವಿವಿಧ ಸಭೆ-ಸಮಾರಂಭಗಳಿಗೆ ಲಘು ಉಪಹಾರ ಊಟೋಪಚಾರದ ವ್ಯವಸ್ಥೆ ಮಾಡುವುದು, ಕಾರ್ಯಕ್ರಮಗಳ ಆಯೋಜನೆ ಹಾಗೂ ಸದರಿ ಸಮಾರಂಭಗಳಿಗೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸುವುದು, ಹೂವಿನ ವ್ಯವಸ್ಥೆ ಮಾಡುವುದು ಜಾಹೀರಾತು ನೀಡುವುದು, ಪತ್ರಿಕಾ ಮಾಧ್ಯಮದವರನ್ನು ಆಹ್ವಾನಿಸುವುದು ಇನ್ನು ಮುಂತಾದ ಕರ್ತವ್ಯಗಳನ್ನು ನಿರ್ವಹಿಸುತ್ತದೆ.


ಮೇಲ್ವಿಚಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀರ್ಮಾನ ಕೈಗೊಳ್ಳುವಲ್ಲಿ ಅನುಸರಿಸುವ ಕ್ರಮಗಳು



  • ಕಛೇರಿಯ ಸಿಬ್ಬಂದಿಯವರು ಸಾರ್ವಜನಿಕರಿಂದ ಬಂದಂತಹ ದೂರು ಕಡತಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸುವುದು
  • ದಿನಪತ್ರಿಕೆಗಳಲ್ಲಿ ಟೆಂಡರ್ ಕರೆದು ಪ್ರಕಟಣೆಗೊಳುವ ಕಡತಗಳನ್ನು ಸ್ವೀಕರಿಸಿ ಆಯಾ ದಿನದಂದೇ ಏಜೆನ್ಸಿಯ ಪ್ರತಿದಿನ ಪ್ರತಿಗಳನ್ನು ಸೂಕ್ತ ಕ್ರಮ ಕೈಗೊಳ್ಳುವುದು.
  • ಪಾಲಿಕೆಯ ವ್ಯಾಪ್ತಿಯೊಳಗೆ ನಡೆಯುವ ಪಾಲಿಕೆಗೆ ಸಂಬಂಧಪಟ್ಟಂತ ವಿವಿಧ ಸಭೆ ಸಮಾರಂಭಗಳ ವ್ಯವಸ್ಥೆಯನ್ನು ನಿಯಮಾನುಸಾರ ನಿರ್ವಹಣೆ ಮಾಡುವುದು, ಕಡತಗಳ ನಿರ್ವಹಣೆ ಹಾಗೂ ಕಾಲಮಿತಿಯಲ್ಲಿ ಬಿಲ್ಲುಗಳ ಮೊತ್ತವನ್ನು ಆಡಳಿತಾತ್ಮಕ ಅನುಮೋದನೆ ಪಡೆದು ಪಾವತಿಸುವುದು ಮತ್ತು ಅತಿಥಿ ಸತ್ಕಾರದ ವ್ಯವಸ್ಥೆಯನ್ನು ಮಾಡುವುದು.
  • ರಾಷ್ಟ್ರೀಯ ಹಬ್ಬಗಳು/ಪಾಲಿಕೆವತಿಯಿಂದ ಆಚರಿಸುವ ಇನ್ನಿತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಆಹ್ವಾನ ಪತ್ರಿಕೆಗಳ ಮುದ್ರಣ ಹಾಗೂ ವಿತರಣೆ ಮಾಡುವುದು. ಬೆಂಗಳೂರು ಮಹಾನಗರಪಾಲಿಕೆ ಮಾನ್ಯ ಮುಖ್ಯಮಂತ್ರಿಗಳು, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು,ಪೂಜ್ಯ ಮಹಾಪೌರರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭಗಳಿಗೆ, ರಾಷ್ಟ್ರೀಯ ಹಬ್ಬಗಳಿಗೆ ಹೂಗುಚ್ಛ ಗಳು, ಹೂವಿನ ಅಲಂಕಾರವನ್ನು ದರಪಟ್ಟಿ ಕರೆಯುವ, ತುಲನಾತ್ಮಕ ಪಟ್ಟಿ ತಯಾರಿಸುವ ಪ್ರಕ್ರಿಯೆಯೊಂದಿಗೆ ಒದಗಿಸುವುದು, ಮಾನ್ಯ ರಾಷ್ಟ್ರಪತಿಗಳು, ಸನ್ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಇತರೆ ಪ್ರಮುಖ ಗಣ್ಯವ್ಯಕ್ತಿಗಳು ಬೆಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಅವರಿಗೆ ಸ್ವಾಗತ ಕೋರುವ ಸಲುವಾಗಿ ಸ್ವಾಗತ ಕಮಾನುಗಳು ವ್ಯವಸ್ಥೆ, ಪ್ರಮುಖ ಸಮಾರಂಭಗಳಿಗೆ ಹೂವಿನ ವ್ಯವಸ್ಥೆ, ಸಂಬಂಧಪಟ್ಟ ಕಡತಗಳ ನಿರ್ವಹಣೆ ಹಾಗೂ ಬಿಲ್ಲುಗಳ ಪಾವತಿ ಕ್ರಮಕೈಗೊಳ್ಳುವುದು.
  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು, ಪೂಜ್ಯ ಮಹಾಪೌರರು ಅಧ್ಯಕ್ಷತೆಯಲ್ಲಿ ನಡೆಯುವ ವಿವಿಧ ಸಭೆ-ಸಮಾರಂಭಗಳಿಗೆ ಆಗಮಿಸುವ ಗಣ್ಯವ್ಯಕ್ತಿಗಳಿಗೆ ವಿದೇಶದಿಂದ ಆಗಮಿಸುವ ಗಣ್ಯವ್ಯಕ್ತಿಗಳಿಗೆ, ಪ್ರಮುಖ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಅತಿಥಿ ಗಣ್ಯರಿಗೆ, ಪಾಲಿಕೆಯಿಂದ ನಿವೃತ್ತಿ/ವರ್ಗಾವಣೆ ಹೊಂದುವ ಹಿರಿಯ ಅಧಿಕಾರಿಗಳನ್ನು ಸನ್ಮಾನಿಸುವ ಸಲುವಾಗಿ ಜರಿ ಶಾಲು, ಪೇಟ, ಸ್ಮರಣಿಕೆ, ಏಲಕ್ಕಿ ಹಾರಗಳು ಹಾಗೂ ಹೂಗುಚ್ಚ ಗಳನ್ನು ದರಪಟ್ಟಿ ಕರೆಯುವ, ತುಲನಾತ್ಮಕ ಪಟ್ಟಿ ತಯಾರಿಸುವ ಪ್ರಕ್ರಿಯೆಯೊಂದಿಗೆ ಒದಗಿಸುವುದು ಸಂಬಂಧಪಟ್ಟ ಕಡತಗಳ ನಿರ್ವಹಣೆ ಹಾಗೂ ಬಿಲ್ಲುಗಳ ಪಾವತಿಗೆ ಕ್ರಮಕೈಗೊಳ್ಳುವುದು.
  • ಪೂಜ್ಯ ಮಹಾಪೌರರ ವಿವೇಚನೆಗೆ ಒಳಪಟ್ಟ ಪತ್ರಕರ್ತರು ಹಾಗೂ ಮಾಧ್ಯಮದವರಿಗಾಗಿ ವೈದ್ಯಕೀಯ ಅನುದಾನಗಳ ಬಿಡುಗಡೆಗೆ ಕ್ರಮವಹಿಸುವುದು ಕಡತ ನಿರ್ವಹಣೆ.
  • ಪಾಲಿಕೆಯಲ್ಲಿ ನಡೆಯುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆ, ಅಂಬೇಡ್ಕರ್ ಜಯಂತಿ, ಕೆಂಪೇಗೌಡ ಜಯಂತಿ, ಸ್ವಯಂ ಘೋಷಣೆ ಆಸ್ತಿ ತೆರಿಗೆ, ಎಚ್ಒನ್ಎನ್ಒನ್, ಡೆಂಗ್ಯೂ ಹಾಗೂ ಚಿಕನ್ ಗುನ್ಯಾ, ಮಲೇರಿಯಾ ದಂತಹ ವಿಷಯವಾಗಿ ನಡೆಸುವ ಕಾರ್ಯಕ್ರಮಗಳಿಗೆ ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳು, ನಗರಾಭಿವೃದ್ಧಿಸಚಿವರು, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು, ಪೂಜ್ಯ ಮಹಾಪೌರರು ಉದ್ಘಾಟಿಸಲಿರುವ ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ಮಾಹಿತಿಯುಳ್ಳ ಜಾಹೀರಾತನ್ನು ಸಿದ್ಧಪಡಿಸಿ ದಿನಪತ್ರಿಕೆಗಳಲ್ಲಿ ಡಿಸ್ಪ್ಲೇ ಜಾಹಿರಾತುಗಳನ್ನು ಪ್ರಚುರಪಡಿಸುವ ಅವುಗಳ ಪ್ರತಿಗಳನ್ನು ಸಂಗ್ರಹಿಸುವುದು.