ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಅಧಿಕಾರಗಳು ಮತ್ತು ಕರ್ತವ್ಯಗಳು
|
1 |
ಶ್ರೀ ಸುರೇಶ್ ಎಲ್
ಸಾರ್ವಜನಿಕ ಸಂಪರ್ಕಾಧಿಕಾರಿ(ಪ್ರಭಾರ) |
- ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಪ್ರದತ್ತವಾದ ಎಲ್ಲಾ ಅಧಿಕಾರಗಳನ್ನು ಹೊಂದಿರುತ್ತಾರೆ ಹಾಗೂ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಅಧಿಕಾರವನ್ನು ಹೊಂದಿರುತ್ತಾರೆ.
|
2 |
ಶ್ರೀ ಪ್ರಕಾಶ್ ಪ್ರಥಮ ದರ್ಜೆ ಸಹಾಯಕರು ಸಿ5 |
-
ಪಾಲಿಕೆಯ ವಿವಿಧ ಇಲಾಖೆಗಳಾದ ಕಾಮಗಾರಿ ಇಲಾಖೆ, ತೋಟಗಾರಿಕಾ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕಲ್ಯಾಣ ಇಲಾಖೆ, ಸಾಮಾನ್ಯ ಆಡಳಿತ ಇಲಾಖೆ, ಕಂದಾಯ ಇಲಾಖೆ ಗಳಿಂದ ಬರುವ ಟೆಂಡರುಗಳನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಲು ಕ್ರಮಕೈಗೊಳ್ಳುವುದು. ದಿನಪತ್ರಿಕೆಗಳಲ್ಲಿ ಪ್ರಚುರಗೊಂಡಿರುವುದನ್ನು ಖಾತರಿಪಡಿಸಿಕೊಂಡು ಪತ್ರಿಕೆಯ ಅಮೃತ ತುಣುಕುಗಳನ್ನು ಸಂಗ್ರಹಿಸಿಡುವುದು ಹಾಗೂ ಟೆಂಡರ್ ಪ್ರಕಟಣೆಗೆ ಸಂಬಂಧಿಸಿದ ಹಾಗೂ ಡಿಸ್ಪ್ಲೇ ಜಾಹೀರಾತುಗಳಿಗೆ ಸಂಬಂಧಪಟ್ಟ ಬಿಲ್ಲುಗಳನ್ನು ಪಾವತಿಸುವುದು, ಅವುಗಳ ಕಡತಗಳನ್ನು ನಿರ್ವಹಿಸುವುದು ಹಾಗೂ ಸಂಬಂಧಪಟ್ಟ ಡಿಸಿ ಬಿಲ್ಲು ನಿರ್ವಹಿಸುವುದು.
- ಪಾಲಿಕೆಯಲ್ಲಿ ನಡೆಯುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆ, ಅಂಬೇಡ್ಕರ್ ಜಯಂತಿ, ಕೆಂಪೇಗೌಡ ಜಯಂತಿ, ಸ್ವಯಂ ಘೋಷಣೆ ಆಸ್ತಿ ತೆರಿಗೆ, ಎಚ್ಒನ್ಎನ್ಒನ್, ಡೆಂಗ್ಯೂ ಹಾಗೂ ಚಿಕನ್ ಗುನ್ಯಾ, ಮಲೇರಿಯಾದಂತಹ ವಿಷಯವಾಗಿ ನಡೆಸುವ ಕಾರ್ಯಕ್ರಮಗಳಿಗೆ ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಗಳು, ನಗರಾಭಿವೃದ್ಧಿಸಚಿವರು, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು, ಪೂಜ್ಯ ಮಹಾಪೌರರು ಉದ್ಘಾಟಿಸಲಿರುವ ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ಮಾಹಿತಿಯುಳ್ಳ ಜಾಹೀರಾತನ್ನು ಸಿದ್ಧಪಡಿಸಿ ದಿನಪತ್ರಿಕೆಗಳಲ್ಲಿ ಡಿಸ್ಪ್ಲೇ ಜಾಹಿರಾತುಗಳನ್ನು ಪ್ರಚುರಪಡಿಸುವ ಅವುಗಳ ಪ್ರತಿಗಳನ್ನು ಸಂಗ್ರಹಿಸುವುದು.
- ಪಾಲಿಕೆಗೆ ಮನವಿ ಮಾಡುವ ವಾರಪತ್ರಿಕೆಗಳು, ಪಾಕ್ಷಿಕ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು ಹಾಗೂ ಇನ್ನಿತರ ಸಣ್ಣ ಪತ್ರಿಕೆಗಳಿಗೆ ಸಂಬಂಧಪಟ್ಟ ಬಿಲ್ಲುಗಳನ್ನು ಪಾವತಿಸುವುದು ಹಾಗೂ ಅವುಗಳ ಕಡತಗಳನ್ನು ನಿರ್ವಹಿಸುವುದು.
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು, ಪೂಜ್ಯ ಮಹಾಪೌರರು ಅಧ್ಯಕ್ಷತೆಯಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಛಾಯಾಚಿತ್ರ ಹಾಗೂ ವಿಡಿಯೋಗ್ರಾಫರ್ ವ್ಯವಸ್ಥೆ ಮಾಡುವುದು ಸಂಬಂಧಪಟ್ಟ ಕಡತಗಳ ನಿರ್ವಹಣೆ ಬಿಲ್ಲುಗಳ ಪಾವತಿಗೆ ಕ್ರಮ ಕೈಗೊಳ್ಳುವುದು.
- ಪಾಲಿಕೆಯ ಅಭಿವೃದ್ಧಿ ಯೋಜನೆಗಳ ಕಿರು ಹೊತ್ತಿಗೆಗಳು ಹಾಗೂ ಇನ್ನಿತರ ಸಾರ್ವಜನಿಕ ಮಾಹಿತಿಗಳ ಕರಪತ್ರಗಳು ಹೋರ್ಡಿಂಗ್, ಬ್ಯಾಕ್ ಡ್ರಾಪ್ ಅಳವಡಿಸುವುದು ಮತ್ತು ಅವಶ್ಯಕ ಮುದ್ರಣ ಕಾರ್ಯಗಳು ಹಾಗೂ ಸಾಕ್ಷ್ಯಚಿತ್ರ ನಿರ್ಮಾಣದ ಕಡತಗಳನ್ನು ನಿರ್ವಹಿಸುವುದು.
- ಸಾ.ಸಂ. ಉಗ್ರಾಣ ಹಾಗೂ ಇನ್ನಿತರ ಕಚೇರಿ ಕೆಲಸ ಕಾರ್ಯಗಳು.
|
3 |
ಶ್ರೀಮತಿ ಕುಮುದಾ ಎಚ್ ಪ್ರಥಮ ದರ್ಜೆ ಸಹಾಯಕರು ಸಿ2 |
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು, ಪೂಜ್ಯ ಮಹಾಪೌರರ ಅಧ್ಯಕ್ಷತೆಯಲ್ಲಿ ನಡೆಯುವ ವಿವಿಧ ಸಭೆ-ಸಮಾರಂಭಗಳಿಗೆ ರಾಷ್ಟ್ರೀಯ ಹಬ್ಬಗಳು/ಪಾಲಿಕೆವತಿಯಂದ ಆಚರಿಸುವ ಇನ್ನಿತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಆಹ್ವಾನ ಪತ್ರಿಕೆಗಳ ಮುದ್ರಣ ಹಾಗೂ ವಿತರಣೆ. ಬೆಂಗಳೂರು ಮಹಾನಗರಪಾಲಿಕೆ ಮಾನ್ಯ ಮುಖ್ಯಮಂತ್ರಿಗಳು, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು,ಪೂಜ್ಯ ಮಹಾಪೌರರು ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭಗಳಿಗೆ ರಾಷ್ಟ್ರೀಯ ಹಬ್ಬಗಳಿಗೆ ಹೂಗುಚ್ಛ ಗಳು, ಹೂವಿನ ಅಲಂಕಾರವನ್ನು ದರಪಟ್ಟಿ ಕರೆಯುವ, ತುಲನಾತ್ಮಕ ಪಟ್ಟಿ ತಯಾರಿಸುವ ಪ್ರಕ್ರಿಯೆಯೊಂದಿಗೆ ಒದಗಿಸುವುದು, ಮಾನ್ಯ ರಾಷ್ಟ್ರಪತಿಗಳು, ಸನ್ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಇತರೆ ಪ್ರಮುಖ ಗಣ್ಯವ್ಯಕ್ತಿಗಳು ಬೆಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಅವರಿಗೆ ಸ್ವಾಗತ ಕೋರುವ ಸಲುವಾಗಿ ಸ್ವಾಗತ ಕಮಾನುಗಳು ವ್ಯವಸ್ಥೆ, ಪ್ರಮುಖ ಸಮಾರಂಭಗಳಿಗೆ ಹೂವಿನ ವ್ಯವಸ್ಥೆ, ಸಂಬಂಧಪಟ್ಟ ಕಡತಗಳ ನಿರ್ವಹಣೆ ಹಾಗೂ ಬಿಲ್ಲುಗಳ ಪಾವತಿ ಕ್ರಮಕೈಗೊಳ್ಳುವುದು.
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು, ಪೂಜ್ಯ ಮಹಾಪೌರರ ಅಧ್ಯಕ್ಷತೆಯಲ್ಲಿ ನಡೆಯುವ ವಿವಿಧ ಸಭೆ-ಸಮಾರಂಭಗಳಿಗೆ ಆಗಮಿಸುವ ಗಣ್ಯವ್ಯಕ್ತಿಗಳಿಗೆ ವಿದೇಶದಿಂದ ಆಗಮಿಸುವ ಗಣ್ಯವ್ಯಕ್ತಿಗಳಿಗೆ, ಪ್ರಮುಖ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಅತಿಥಿ ಗಣ್ಯರಿಗೆ, ಪಾಲಿಕೆಯಿಂದ ನಿವೃತ್ತಿ/ವರ್ಗಾವಣೆ ಹೊಂದುವ ಹಿರಿಯ ಅಧಿಕಾರಿಗಳನ್ನು ಸನ್ಮಾನಿಸುವ ಸಲುವಾಗಿ ಜರಿ ಶಾಲು, ಪೇಟ, ಸ್ಮರಣಿಕೆ, ಏಲಕ್ಕಿ ಹಾರಗಳು ಹಾಗೂ ಹೂಗುಚ್ಚ ಗಳನ್ನು ದರಪಟ್ಟಿ ಕರೆಯುವ, ತುಲನಾತ್ಮಕ ಪಟ್ಟಿ ತಯಾರಿಸುವ ಪ್ರಕ್ರಿಯೆಯೊಂದಿಗೆ ಒದಗಿಸುವುದು ಸಂಬಂಧಪಟ್ಟ ಕಡತಗಳ ನಿರ್ವಹಣೆ ಹಾಗೂ ಬಿಲ್ಲುಗಳ ಪಾವತಿಗೆ ಕ್ರಮಕೈಗೊಳ್ಳುವುದು.
- ಪ್ರತಿದಿನ ಹಾಜರಾತಿ ಪುಸ್ತಕವನ್ನು ನಿಯಂತ್ರಣದಲ್ಲಿರಿಸಿಕೊಂಡು ಮುಖ್ಯಸ್ಥರು ಕೇಳಿದಾಗ ಕೊಡುವುದು.
- ಲೆಕ್ಕಪತ್ರಗಳ ನಿರ್ವಹಣೆ ಕಚೇರಿ, ಡಿ ಸಿ ಬಿಲ್ಲಿನ ರಿಜಿಸ್ಟರ್ ನಿರ್ವಹಣೆ.
- ಸಾಮಾನ್ಯ ಆಂತರಿಕ ಕಛೇರಿ ಟಿಪ್ಪಣಿ ಹಾಗೂ ಪ್ರಸ್ತಾವನೆ ಕಡತಗಳ ವ್ಯವಸ್ಥೆಗೊಳಿಸುವುದು.
- ಪಾಲಿಕೆಯ ಕೇಂದ್ರ ಕಛೇರಿಯ ವಿವಿಧ ಕಚೇರಿಗಳಿಗೆ ನೀರಿನ ವ್ಯವಸ್ಥೆ ಹಾಗೂ ಕೇಬಲ್ ವ್ಯವಸ್ಥೆ ಸಂಬಂಧಪಟ್ಟ ಬಿಲ್ಲುಗಳ ಪಾವತಿಗೆ ಕ್ರಮ ಕೈಗೊಳ್ಳುವುದು.
- ಜೆರಾಕ್ಸ್ ಮತ್ತು ಯಂತ್ರದ ನಿರ್ವಹಣೆ.
- ಕಛೇರಿ ಸಾಮಾಗ್ರಿ ಖರೀದಿ ಯನ್ನು ದರಪಟ್ಟಿ ಕರೆಯುವ ತುಲನಾತ್ಮಕ ಪಟ್ಟಿ ತಯಾರಿಸುವ ಪ್ರಕ್ರಿಯೆಯೊಂದಿಗೆ ಮಾಡುವುದು ಸ್ಟೇಷನರಿ ವೆಚ್ಚೆಗಳು ನಿರ್ವಹಣೆ ಹಾಗೂ ಬಿಲ್ಲುಗಳ ಪಾವತಿ ನಿರ್ವಹಣೆ.
- ಪಾಲಿಕೆಯ ಕೇಂದ್ರ ಕಚೇರಿಯ ಪ್ರಮುಖ ಕಛೇರಿಗಳಿಗೆ ದಿನಪತ್ರಿಕೆಗಳ ವಿತರಣೆ ಮತ್ತು ಬಿಲ್ ಪಾವತಿ.
- ಸಾ.ಸಂ ವಿಭಾಗದ ಉಗ್ರಾಣ ದ ನಿರ್ವಹಣೆ.
- ಮಾಹಿತಿ ಹಕ್ಕು ಕಾಯ್ದೆ 2005ರ ಅಡಿಯಲ್ಲಿ ಸಲ್ಲಿಸಲಾಗುವ ಅರ್ಜಿಗಳಿಗೆ ಮಾಹಿತಿ ನೀಡುವುದು ಹಾಗೂ ಸಂಬಂಧಪಟ್ಟ ಕಡತಗಳ ನಿರ್ವಹಣೆ.
- ವರ್ಷಕ್ಕೊಮ್ಮೆ ನಡೆಯುವ ನಾಡಪ್ರಭು ಕೆಂಪೇಗೌಡ ದಿನಾಚರಣೆ ಸಂಬಂಧ ಸಲ್ಲಿಸಲಾಗುವ ಅರ್ಜಿಗಳನ್ನು ಗಣಕೀಕರಣಗೊಳಿಸುವ, ಪಟ್ಟಿಮಾಡಿ ಪೂಜ್ಯ ಮಹಾಪೌರರ ಕಚೇರಿಯೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದ ಪ್ರಶಸ್ತಿ ಪುರಸ್ಕತರ ಆಯ್ಕೆ ಮಾಡುವಲ್ಲಿ ಎಲ್ಲಾ ಸಹಕಾರದೊಂದಿಗೆ ಕಾರ್ಯನಿರ್ವಹಣೆ ಹಾಗೂ ಕಡತಗಳ ನಿರ್ವಹಣೆ.
- ಚುನಾವಣೆ ನೀತಿ ಸಂಹಿತೆ ಜಾರಿಯಾದ ಸಂದರ್ಭದಲ್ಲಿ ಎಂ.ಸಿ.ಎಂ.ಸಿ ಕೋಶದ ಸ್ಥಾಪನೆ ಅಧಿಕಾರಿ ಸಿಬ್ಬಂದಿಗಳ ನಿಯೋಜನೆ ನಿರ್ವಹಣೆ.
|
4 |
ಶ್ರೀಮತಿ ವಿಜಯಲಕ್ಷ್ಮಿ ಎಸ್ ಪ್ರಥಮ ದರ್ಜೆ ಸಹಾಯಕರು ಸಿ3 |
- ಕೇಂದ್ರ ಕಚೇರಿಯ ಸಭಾಂಗಣ-1 ಮತ್ತು ಸಭಾಂಗಣ-2 ರಲ್ಲಿ ಹಾಗೂ ಐ.ಪಿ.ಪಿ ಕೇಂದ್ರ ಮಲ್ಲೇಶ್ವರಂ ನಲ್ಲಿ ಪೂಜ್ಯ ಮಹಾಪೌರರು, ಉಪಮಹಾಪೌರರು, ಆಯುಕ್ತರು ಹಾಗೂ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗಳು, ಅತಿಥಿಸತ್ಕಾರ ಹಾಗೂ ಇನ್ನಿತರ ಕಾರ್ಯಕ್ರಮಗಳ ವೆಚ್ಚಗಳು ಹಾಗೂ ಲಘು ಉಪಹಾರ/ಕಾಫಿ/ಟಿ/ವರ್ಕಿಂಗ್ ಲಂಚ್ ಸಂಬಂಧಿಸಿದಂತೆ ಇತ್ಯಾದಿಗಳನ್ನು ಸರಬರಾಜು/ವ್ಯವಸ್ಥೆಗೊಳಿಸುವುದು ಹಾಗೂ ಹೋಟೆಲು ಬಿಲ್ಲುಗಳ ಪಾವತಿ ಕ್ರಮಕೈಗೊಳ್ಳುವುದು ಹಾಗೂ ಸಂಬಂಧಪಟ್ಟ ಕಡತಗಳ ನಿರ್ವಹಣೆ.
- ಪಾಲಿಕೆಯ ವತಿಯಿಂದ ಆಚರಿಸುವ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಆಹ್ವಾನ ಪತ್ರಿಕಗಳ ಮುದ್ರಣ ಹಾಗೂ ವಿತರಣೆ.
- ಪಾಲಿಕೆ ವತಿಯಿಂದ ನಡೆಸಲಾಗುವ ತಪಾಸಣೆಗಳ ವರದಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವುದು.
- ಕಛೇರಿ ಟೆಲಿಫೋನ್, ವಾಹನ ಮತ್ತುಇಂಧನ ಬಿಲ್ಲುಗಳ ಪಾವತಿಸುವುದು ಹಾಗೂ ಅವುಗಳ ಕಡತ ನಿರ್ವಹಣೆ.
- ಪ್ರತಿನಿತ್ಯ ಪ್ರಕಟನೆಗಾಗಿ ಕಳುಹಿಸುವ ನ್ಯೂ ಬುಲೆಟಿನ್ ಗಳ ಸಂಗ್ರಹಣೆ ಮತ್ತು ನಿರ್ವಹಣೆ.
- ದಿನನಿತ್ಯ ಪತ್ರಿಕಾ ತುಣುಕುಗಳ ಸಂಗ್ರಹಣೆ ಮತ್ತು ಇಲಾಖಾ ಮುಖ್ಯಸ್ಥರುಗಳಿಗೆ ರವಾನೆ.
- ಪಾಲಿಕೆ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ದೂರುಗಳನ್ನು ದಿನನಿತ್ಯ ಸಂಗ್ರಹಿಸಿ ಸಂಬಂಧಪಟ್ಟವರಿಗೆ ಕಳುಹಿಸಿ ಪತ್ರಿಕೆಗಳಿಗೆ ಸ್ಪಷ್ಟೀಕರಣ ನೀಡುವುದು.
- ಸಾ.ಸಂ ವಿಭಾಗದ ಉಗ್ರಾಣ ಹಾಗೂ ಇನ್ನಿತರ ಕಚೇರಿ ಕೆಲಸ ಕಾರ್ಯಗಳು.
- ಪೂಜ್ಯ ಮಹಾಪೌರರ ವಿವೇಚನೆಗೆ ಒಳಪಟ್ಟ ಪತ್ರಕರ್ತರು ಹಾಗೂ ಮಾಧ್ಯಮದವರಿಗಾಗಿ ವೈದ್ಯಕೀಯ ಅನುದಾನಗಳ ಕ್ರಮವಹಿಸುವುದು ಹಾಗೂ ಕಡತಗಳ ನಿರ್ವಹಣೆ.
- ಪಾಲಿಕೆಯ ಮಾಹಿತಿಗಳನ್ನು ಸಮಗ್ರವಾಗಿ ಸಾರ್ವಜನಿಕರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿರುವ ಮುದ್ರಣ ಮಾಧ್ಯಮ ಹಾಗು ಟಿವಿ ಪತ್ರಕರ್ತರಿಗೆ ಆರೋಗ್ಯ ರಕ್ಷಣೆಯ ಅಂಗವಾಗಿ ಸಾಮೂಹಿಕ ವಿಮೆಯ ಕಡತ ನಿರ್ವಹಣೆ ಮಾಡುವುದು.
|
5 |
ಕುಮಾರಿ ಕಾವ್ಯ ಇ ದ್ವಿತೀಯ ದರ್ಜೆ ಸಹಾಯಕರು ಸಿ1 |
- ಟಪಾಲು ಸ್ವೀಕಾರ ಮತ್ತು ರವಾನೆ.
- ಪಾಲಿಕೆಯ ವಿವಿಧ ಇಲಾಖೆಗಳಾದ ಕಾಮಗಾರಿ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕಲ್ಯಾಣ ಇಲಾಖೆ, ಸಾಮಾನ್ಯ ಆಡಳಿತ ಇಲಾಖೆ, ಕಂದಾಯ ಇಲಾಖೆಗಳಿಂದ ಬರುವ ಟೆಂಡರುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಕ್ರಮಕೈಗೊಳ್ಳುವುದು. ದಿನಪತ್ರಿಕೆಗಳಲ್ಲಿ ಪ್ರಚುರ ಗೊಂಡಿರುವುದನ್ನು ಖಚಿತಪಡಿಸಿಕೊಂಡು ಪತ್ರಿಕೆಯ ತುಣುಕುಗಳನ್ನು ಸಂಗ್ರಹಿಸುವುದು ಹಾಗೂ ಟೆಂಡರ್ ಪ್ರಕಟಣೆ ಸಂಬಂಧಿಸಿದ ಹಾಗೂ ಡಿಸ್ಪ್ಲೇ ಜಾಹೀರಾತುಗಳಿಗೆ ಸಂಬಂಧಪಟ್ಟ ಬಿಲ್ಲುಗಳನ್ನು ಪಾವತಿಸುವುದು ಅವುಗಳನ್ನು ನಿರ್ವಹಿಸುವುದು ಹಾಗೂ ಸಂಬಂಧಪಟ್ಟ ಡಿಸಿ ಬಿಲ್ಲು ರಿಜಿಸ್ಟರ್ ನಿರ್ವಹಿಸುವುದು.
- ಪಾಲಿಕೆಗೆ ಮನವಿ ಮಾಡುವ ವಾರಪತ್ರಿಕೆಗಳು, ವಾರ್ಷಿಕ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು ಹಾಗೂ ಇನ್ನಿತರ ಸಣ್ಣ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಮಾಡು ಸಂಬಂಧಪಟ್ಟ ಬಿಲ್ಲುಗಳನ್ನು ಪಾವತಿಸುವುದು ಹಾಗೂ ಅವುಗಳ ಕಡತಗಳನ್ನು ನಿರ್ವಹಿಸುವುದು.
- ಸಾ.ಸಂ ವಿಭಾಗದ ಉಗ್ರಾಣ ಹಾಗೂ ಇನ್ನಿತರ ಕಚೇರಿ ಕೆಲಸ ಕಾರ್ಯಗಳು.
|
6 |
ಶ್ರೀ ಚಂದ್ರಶೇಖರ್ ಕೆ ಚಾಲಕರು |
- ಸದರಿಯವರು ವಿವಿಧ ಸಭೆ ಸಮಾರಂಭ ತಪಾಸಣಾ ಕಾರ್ಯಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಾರೆ.
|
7 |
ಶ್ರೀ ನಾಗರಾಜು ಆರ್ ಚಾಲಕರು |
- ಸಹಾಯಕ ಆಯುಕ್ತರು ಆಡಳಿತ ರವರ ಕಚೇರಿಯಲ್ಲಿ ವೇತನ ಪಡೆದು ಸಾರ್ವಜನಿಕ ಸಂಪರ್ಕಾಧಿಕಾರಿ ಅವರ ವಾಹನದ ಚಾಲಕರಾಗಿ ಕಾರ್ಯನಿರ್ವಹಿಸುತ್ತಾರೆ.
|
8 |
ಶ್ರೀ ಜಯಾನಂದ ಚಾಲಕರು |
- ಕಾರ್ಯಪಾಲಕ ಅಭಿಯಂತರರು ಯೋಜನೆ ದಕ್ಷಿಣ ರವರ ಕಚೇರಿಯಿಂದ ಜೋಡಿ ಆಧಾರದ ಮೇಲೆ ಸಾರ್ವಜನಿಕ ಸಂಪರ್ಕಾಧಿಕಾರಿರವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.
|
9 |
ಕು ಮಂಜು ಎಂ ನಾ ದ ನೌ |
- ಅಧೀಕ್ಷಕ ಅಭಿಯಂತರರು ಟಿ.ವಿ.ಸಿ.ಸಿ ರವರ ಕಚೇರಿಯಿಂದ ಓ.ಓ.ಡಿ ಆಧಾರದ ಮೇಲೆ ಸಾರ್ವಜನಿಕ ಸಂಪರ್ಕಾಧಿಕಾರಿ ರವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾರೆ.
- ಬೆಳಿಗ್ಗೆ 8ಗಂಟೆಗೆ ಹಾಜರಾಗಿ ಸಾರ್ವಜನಿಕ ಸಂಪರ್ಕ ಅಧಿಕಾರಿಯವರ ಕಚೇರಿ ತೆಗೆದು ಸ್ವಚ್ಛಗೊಳಿಸುವುದು ಹಾಗೂ ದಿನನಿತ್ಯ ಕಾರ್ಯನಿರ್ವಹಿಸುವ ಕಡತಗಳನ್ನು ಸಂಬಂಧಪಟ್ಟ ಕಚೇರಿಗಳಿಗೆ ರವಾನಿಸುವುದು ದಿನನಿತ್ಯದ ಪಾಲಿಕೆಗೆ ಸಂಬಂಧಪಡುವ ವಿಷಯದ ಪತ್ರಿಕಾ ತುಣುಕುಗಳನ್ನು ಸಂಗ್ರಹಿಸಿ ಜೆರಾಕ್ಸ್ ಮಾಡಿ ಪ್ರತಿಗಳನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರುಗಳಿಗೆ ರವಾನೆ ಮಾಡುವುದು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ಸೂಚಿಸುವ ಮೇರೆಗೆ ಸಾ.ಸಂ.ಅ ವಿಭಾಗದಿಂದ ಸಂಬಂಧಪಟ್ಟ ಪತ್ರಗಳನ್ನು ಸಂಬಂಧಪಡುವ ಇಲಾಖೆಗಳಿಗೆ ರವಾನಿಸುವುದು.
|
10 |
ಶ್ರೀ ಹರಿಪ್ರಸಾದ್ ಕೆಎಸ್ ನಾ ದ ನೌ |
- ಸಾರ್ವಜನಿಕ ಸಂಪರ್ಕ ಕಚೇರಿಗೆ ಸಂಬಂಧಪಟ್ಟ ಟಪಾಲು ರವಾನೆ ಮಾಡುವುದು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಯವರು ಸೂಚಿಸುವವರಿಗೆ ಸಾ.ಸಂ.ಅ ವಿಭಾಗದಿಂದ ಸಂಬಂಧಪಟ್ಟ ಪತ್ರಗಳನ್ನು ಸಂಬಂಧಪಡುವ ಇಲಾಖೆಗಳಿಗೆ ರವಾನಿಸುವುದು.
|
11 |
ಶ್ರೀ ಚಂದ್ರಶೇಖರ್ ನಾ ದ ನೌ |
- ಸಾರ್ವಜನಿಕ ಸಂಪರ್ಕ ಕಚೇರಿಗೆ ಸಂಬಂಧಪಟ್ಟ ಟಪಾಲು ರವಾನೆ ಮಾಡುವುದು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಯವರು ಸೂಚಿಸುವವರಿಗೆ ಸಾ.ಸಂ.ಅ ವಿಭಾಗದಿಂದ ಸಂಬಂಧಪಟ್ಟ ಪತ್ರಗಳನ್ನು ಸಂಬಂಧಪಡುವ ಇಲಾಖೆಗಳಿಗೆ ರವಾನಿಸುವುದು.
|
12 |
ಶ್ರೀ ಗಣೇಶ್ ಭದ್ರತಾಪಡೆ ನೌಕರರು |
- ಕೇಂದ್ರ ಕಚೇರಿಯಲ್ಲಿ ಭದ್ರತಾ ಪಡೆಯ ಕಾರ್ಯನಿರ್ವಹಿಸುತ್ತಾರೆ.
|
13 |
ಶ್ರೀ ವೀರಾಮಣಿ ಶುಚಿಗಾರರು |
- ಸ.ಕಾ.ನಿ.ಅ (ಚಾಮರಾಜಪೇಟೆ) ರವರ ಕಚೇರಿಯಿಂದ ಓಓಡಿ ಆಧಾರದ ಮೇಲೆ ಸಾರ್ವಜನಿಕ ಸಂಪರ್ಕಾಧಿಕಾರಿ ಯವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ.
|
14 |
ಶ್ರೀ ಕಾವೇರಿಯನ್ ಶುಚಿಗಾರರು |
- ಸ.ಕಾ.ನಿ.ಅ (ಕಾಟನ್ ಪೆಟ್) ರವರ ಕಚೇರಿಯಿಂದ ಓಓಡಿ ಆಧಾರದ ಮೇಲೆ ಸಾರ್ವಜನಿಕ ಸಂಪರ್ಕಾಧಿಕಾರಿ ಯವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ.
|
15 |
ಶ್ರೀ ದೇವರಾಜ್ ಶುಚಿಗಾರರು |
- ಡಿ.ಇ.ಒ (ದೊಮ್ಮಲೂರು) ರವರ ಕಚೇರಿಯಿಂದ ಓಓಡಿ ಆಧಾರದ ಮೇಲೆ ಸಾರ್ವಜನಿಕ ಸಂಪರ್ಕಾಧಿಕಾರಿ ಯವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ.
|
16 |
ಶ್ರೀ ಗಂಗಾಧರ್ ಶುಚಿಗಾರರು |
- ಸ.ಕಾ.ನಿ.ಅ (ಚಾಮರಾಜಪೇಟೆ) ರವರ ಕಚೇರಿಯಿಂದ ಓಓಡಿ ಆಧಾರದ ಮೇಲೆ ಸಾರ್ವಜನಿಕ ಸಂಪರ್ಕಾಧಿಕಾರಿ ಯವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ.
|