ಇ-ಆಡಳಿತ ತಂತ್ರಾಂಶಗಳ ಅಭಿವೃದ್ಧಿ

ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರವು ಪ್ರಮುಖವಾಗಿ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದಲ್ಲಿ ಇ-ಆಡಳಿತ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುತ್ತದೆ. ಕೇವಲ ತಂತ್ರಾಂಶ ಅಭಿವೃದ್ಧಿಗೆ ಸೀಮಿತಗೊಳ್ಳದೆ ಆಡಳಿತದ ವಿವಿಧ ಹಂತಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಅದನ್ನು ಕಾರ್ಯಗತಗೊಳಿಸುವಲ್ಲಿ ತೊಡಗಿಕೊಂಡಿದೆ. ಹೀಗಾಗಿ ತಂತ್ರಾಂಶ ಅಭಿವೃದ್ಧಿ ಪರಿಣತಿಯ ಜೊತೆಗೆ ಸರ್ಕಾರಿ ಕಾರ್ಯವೈಖರಿಗಳಲ್ಲಿ ಪರಿಣತಿ ಹೊಂದಿರುವುದರಿಂದ ತಂತ್ರಾಂಶ ಅಭಿವೃದ್ಧಿಯಲ್ಲಿ ಭದ್ರವಾದ ಅಡಿಪಾಯದೊಂದಿಗೆ ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಇಲಾಖೆ ಮುಂಚೂಣಿಯಲ್ಲಿದೆ. ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ವಿವಿಧ ಇಲಾಖೆಗಳು ನಿರಂತರವಾಗಿ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ಸಿದ್ದಪಡಿಸಲಾಗುವ ಕುಶಲ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತೊಡಗಿವೆ. ಈ ತಂತ್ರಾಂಶಗಳು ಸಂಪೂರ್ಣವಾಗಿ ಸ್ಥಳಜನ್ಯ, ಗ್ರಾಹಕಸ್ನೇಹಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಇತ್ತೀಚಿನ ಪ್ರಗತಿಗಳ ಪ್ರಯೋಜನವನ್ನು ನಾಗರಿಕರ ಹತ್ತಿರಕ್ಕೆ ತರುತ್ತದೆ.

ದತ್ತಾಂಶ ಕೇಂದ್ರದ (ಡೇಟಾ ಸೆಂಟರ್) ಸೇವೆಗಳು

ಕರ್ನಾಟಕದ ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಇಲಾಖೆಯ ದತ್ತಾಂಶ ಕೇಂದ್ರದಿಂದ ದೊರೆಯುವ ಮುಖ್ಯ ಸೇವೆಗಳು

ದತ್ತಾಂಶ ಕೇಂದ್ರದ ಮತ್ತು ಗ್ರಾಹಕರ ಸರ್ವರ್ಗಳ 24x7 ಘಂಟೆ ಮೇಲ್ವಿಚಾರಣೆ ಸ್ಟೇಟ್-ಆಫ್-ಆರ್ಟ್ ಅಂತರ್ಜಾಲ ಮತ್ತು ಭೌತಿಕ ಭದ್ರತೆ ಬಹು ಸೇವಾ ಪೂರೈಕೆದಾರರ ಮೂಲಕ 10 GBPS ವೇಗದ ಇಂಟರ್ನೆಟ್ ಸಂಪರ್ಕ ತಡೆರಹಿತ ವಿದ್ಯುತ್ ಸಂಪರ್ಕ (ಯುಪಿಎಸ್) ಮತ್ತು ಡೀಸೆಲ್ ಜನರೇಟರ್ ಸೌಲಭ್ಯ ಸರ್ವರ್ ರ‍್ಯಾಕ್‌ಗಳಿಗೆ ವಿದ್ಯುತ್ ವಿತರಣೆಗಾಗಿ ಬಸ್‍ಬಾರ್ ಟ್ರಂಕಿಂಗ್ ವ್ಯವಸ್ಥೆ ನಿಖರವಾದ ಹವಾನಿಯಂತ್ರಣ ವ್ಯವಸ್ಥೆ ಒಳಾವರಣ ಹವಾನಿಯಂತ್ರಣ ಸೌಕರ್ಯ ಕೇಬ್ಲಿಂಗ್‍ಗಾಗಿ ಓವರ್‍ಹೆಡ್ ಕೇಬಲ್ ಟ್ರೇಗಳು ಸರ್ವರ್‍ಗಳಿಗೆ ಸಂಕಿರಣ (ನೆಟ್ ವರ್ಕ್) ಸಂಪರ್ಕವನ್ನು ಒದಗಿಸಲು ಎಂಡ್-ಆಫ್-ರೋ ವಿನ್ಯಾಸ ಸುರಕ್ಷಿತ ಫೈರ್‍ವಾಲ್ ಮತ್ತು ಅತಿಕ್ರಮಣ ನಿರೀಕ್ಷಣಾ ವ್ಯವಸ್ಥೆ (ಇಂಟ್ರೂಷನ್ ಡಿಟೆಕ್ಷನ್ ಸಿಸ್ಟಮ್ಸ್) ಅನೇಕ ರ‍್ಯಾಕ್‌ ಮೌಂಟ್ ಮತ್ತು ಬ್ಲೇಡ್ ಸರ್ವರ್ಗಳು ಸರ್ವರ್ ವರ್ಚುವಲೈಸೇಶನ್ 63 ಟಿಬಿ ಸಾಮರ್ಥ್ಯದ SAN ಸಂಗ್ರಹಣೆ ಬ್ಯಾಕ್ಅಪ್‍ಗಾಗಿ ATL (ಸ್ವಯಂಚಾಲಿತ ಟೇಪ್ ಲೈಬ್ರರಿ) ಲ್ಯಾನ್ ಸ್ವಿಚ್‍ಗಳು ಮತ್ತು ಫೈಬರ್ ಸ್ವಿಚ್‍ಗಳು  ತಂತ್ರಾಂಶ ಕಾರ್ಯ ಒತ್ತಡ ಸಮತೋಲಿತ ನಿರ್ವಾಹಕಗಳು(ಅಪ್ಲಿಕೇಶನ್ ಲೋಡ್ ಬ್ಯಾಲೆನ್ಸರ್)

ಸಂಕಿರಣ ವ್ಯವಸ್ಥೆ (ನೆಟ್ವರ್ಕಿಂಗ್)

ಬಿಬಿಎಂಪಿಯ ಎಲ್ಲಾ ಇಲಾಖೆಗಳು ಮತ್ತು ಬಿಬಿಎಂಪಿ ಕಚೇರಿಗಳಿಗೆ ನೆಟ್‌ವರ್ಕ್ ಬೆನ್ನೆಲುಬನ್ನು ಒದಗಿಸುತ್ತಿದೆ

ಲೀಸ್ಡ್ ಲೈನ್, ಲ್ಯಾನ್, ವಿಪಿಎನ್, ವೈಫೈ, ಅಂತರ್ಜಾಲ ಸಂಪರ್ಕ, ವೈರಸ್ ವಿರೋಧಿ ತಂತ್ರಾಂಶ, ಓಎಸ್ ಪ್ಯಾಚ್ ಗಳ ನಿರ್ವಹಣೆ

ಜಾಲತಾಣ ತಂತ್ರಾಂಶಗಳ ಆತಿಥ್ಯಕಾರಣಿ (ಹೋಸ್ಟಿಂಗ್)

ಜಾಲತಾಣವು ಪ್ರತಿ ಸಂಸ್ಥೆಯ ವಿದ್ಯನ್ಮಾನ ಮುಖವಾಗಿರುತ್ತದೆ. ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಇಲಾಖೆ ಜಾಲತಾಣ,ತಂತ್ರಾಂಶಗಳ ವಿನ್ಯಾಸ, ಅಭಿವೃದ್ಧಿ, ಜಾಲತಾಣ ಆತಿಥ್ಯಕಾರಣಿಯಾಗಿ ನೈಪುಣ್ಯದ ಕಲೆಗಳನ್ನು ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದೆ ಮತ್ತು ಚಂದವಾದ ಉಪಸ್ಥಿತಿಯನ್ನು ನೀಡುತ್ತಿದೆ. ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಇಲಾಖೆ ಇತರ ಸಂಸ್ಥೆಗಳಿಗೆ ತಮ್ಮ ಜಾಲತಾಣಗಳನ್ನು ಸುಲಭವಾಗಿ ನವೀಕರಿಸುವ ಕಾರ್ಯ ವಿಧಾನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ವೇಗವರ್ಧಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಇಲಾಖೆದ ವಿನ್ಯಾಸ ಪ್ರಯೋಗಾಲಯವು ಇತ್ತೀಚಿನ ತಂತ್ರಾಂಶಗಳೊಂದಿಗೆ ಸುಸಜ್ಜಿತವಾಗಿದೆ. ಈ ಪ್ರಯೋಗಾಲಯವು ವಿಷಯವಸ್ತು ಅಭಿವೃದ್ಧಿ, ರೇಖಾಚಿತ್ರ ವಿನ್ಯಾಸ ಮತ್ತು ಚಲನ ವಿನ್ಯಾಸ, ಬಹುಮಾಧ್ಯಮ/ ಜಾಲತಾಣ ರಚನೆ ಮತ್ತು ಪ್ರೋಗ್ರಾಮಿಂಗ್ ಕ್ಷೇತ್ರಗಳಲ್ಲಿ ಉತ್ತಮವಾದ ವೃತ್ತಿಪರ ಪ್ರತಿಭೆಯ ಪರಿಪೂರ್ಣ ಮಿಶ್ರಣವಾಗಿದೆ. ವೃತ್ತಿಪರರು ತಮ್ಮ ವಿಷಯ ಕ್ಷೇತ್ರಗಳಲ್ಲಿನ ಇತ್ತೀಚಿನ ಉಪಕರಣ ಮತ್ತು ತಂತ್ರಜ್ಞಾನಗಳ ನೆಲೆಯಲ್ಲಿ ತರಬೇತರಾಗಿದ್ದರೆ.

ವಿ-ಅಂಚೆ (ಇ-ಮೇಲ್) ಮತ್ತು ಲಘುಸಂದೇಶ (SMS) ಮೆಸೇಜಿಂಗ್ ಸೇವೆಗಳು

ವಿ-ಅಂಚೆ ಮತ್ತು ಲಘು ಸಂದೇಶ ಸೇವೆಗಳು 'ಮೆಸೇಜಿಂಗ್ ಸೇವೆ' ಸಂಕಿರಣ ಜಾಲದಾದ್ಯಂತ ನಿಯೋಜಿಸಲಾದ ಪ್ರಾಥಮಿಕ ಸೇವೆಗಳಲ್ಲಿ ಒಂದಾಗಿದೆ. ವಿದ್ಯುನ್ಮಾನ ಅಂಚೆಗಳನ್ನು ಒಂದೇ ಪ್ರವೇಶ ದ್ವಾರದಿಂದ ಅಂದರೆ ಎಸ್‍ಎಮ್‍ಟಿಪಿ ಗೇಟ್‍ವೇ ಮೂಲಕ ನಿಕ್‍ನೆಟ್ ನಲ್ಲಿ ಅಂಗೀಕರಿಸಲಾಗುತ್ತದೆ ಮತ್ತು ಕಳುಹಿಸಲಾಗುತ್ತದೆ. ಒಂದು ವಿದ್ಯುನ್ಮಾನ ಅಂಚೆ ಮತ್ತು ಲಘು ಸಂದೇಶವು ಸಂಕಿರಣ ಜಾಲದಲ್ಲಿ ಅಂಗೀಕರಿಸಲ್ಪಟ್ಟಾಗ ಅದರ ವಿಳಾಸವನ್ನು ಆಧರಿಸಿ ಸಂಭಂಧಪಟ್ಟ ಸರ್ವರ್-ಗೆ ಕಳುಹಿಸಲಾಗುತ್ತದೆ. ಅಂತರ್ಜಾಲಕ್ಕೆ ಸಂಪರ್ಕಿತವಾಗಿರುವ ಪ್ರತಿ ಸಂಕಿರಣ ಜಾಲಕ್ಕೆ ಡೊಮೈನ್ ಹೆಸರು ಸಂಯೋಜಿತವಾಗಿರುತ್ತೆ, ಇದು ವಿದ್ಯುನ್ಮಾನ ಅಂಚೆ ಮತ್ತು ಇತರ ಸಂಚಾರವನ್ನು ಸರಿಯಾದ ಸ್ವೀಕೃತದಾರರಿಗೆ ತಲುಪುವಂತೆ ಖಚಿತಪಡಿಸುತ್ತದೆ. ನಿಕ್‍ನೆಟ್ ಸಂದರ್ಭದಲ್ಲಿ, ಈ ಡೊಮೇನ್ ಅನ್ನು "nic.in" ಎಂದು ಕರೆಯಲಾಗುತ್ತದೆ. ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಬಳಕೆದಾರರ ಎಲ್ಲಾ ಇಮೇಲ್ "home.user[at]nic[dot]in" ಗೆ ನಿರ್ದೇಶಿಸಲ್ಪಡುತ್ತವೆ. ಇತರ ಸರ್ಕಾರಿ ಇಲಾಖೆಗಳಿಂದ ಬಳಸಲುಗುತ್ತಿರುವ "Gov.in" ಡೊಮೇನ್ ಖಾತೆಗಳನ್ನು ಸಹ ಬಿಬಿಎಂಪಿ ಮಾಹಿತಿ ತಂತ್ರಜ ್ಞಾನ ಇಲಾಖೆಯು ನಿರ್ವಹಿಸುತ್ತಿದೆ.

ದೃಶ್ಯ ಸಂವಹನ ಸಮ್ಮೇಳನ (ವಿಡಿಯೋ ಕಾನ್ಫರೆನ್ಸಿಂಗ್) ಸೇವೆಗಳು

ಬಿಬಿಎಂಪಿ ಐಟಿ ಅತ್ಯುತ್ತಮ ವಿಡಿಯೋ ಕಾನ್ಫರೆನ್ಸಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಪ್ರಸ್ತುತ ಎಲ್ಲಾ ಇಲಾಖೆಗಳು ಸೇರಿದಂತೆ ದೇಶಾದ್ಯಂತ ಹರಡಿರುವ ಬಿಬಿಎಂಪಿ ಐಟಿನೆಟ್ ಮೂಲಕ ಎಲ್ಲಾ ವಲಯ ಮತ್ತು ವಾರ್ಡ್ ಕಚೇರಿಗಳಿಂದ ಸೇವೆಗಳು ಲಭ್ಯವಿದೆ. ಎಲ್ಲಾ ಬಿಬಿಎಂಪಿ ಐಟಿ ಸ್ಥಳಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೈ ಡೆಫಿನಿಷನ್ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿವಿಧ ಸರ್ಕಾರಿ ಯೋಜನೆಗಳು, ಸಾರ್ವಜನಿಕ ಕುಂದುಕೊರತೆಗಳ ಮೇಲ್ವಿಚಾರಣೆ, ಕಾನೂನು ಸುವ್ಯವಸ್ಥೆ ಮೇಲ್ವಿಚಾರಣೆ, ಆರ್‌ಟಿಐ ಪ್ರಕರಣಗಳ ವಿಚಾರಣೆ, ದೂರ ಶಿಕ್ಷಣ, ಟೆಲಿ-ಮೆಡಿಸಿನ್, ಚುನಾವಣಾ ಪ್ರಕ್ರಿಯೆಗಳ ಮೇಲ್ವಿಚಾರಣೆ, ಹೊಸ ಯೋಜನೆಗಳ ಪ್ರಾರಂಭ ಮತ್ತು ಮುಂತಾದವುಗಳಿಗೆ ವಿಡಿಯೋಕಾನ್ಫರೆನ್ಸಿಂಗ್ ಸೇವೆಗಳನ್ನು ಬಳಸಲಾಗುತ್ತಿದೆ. ಬಿಬಿಎಂಪಿ ಐಟಿಯ ವಿಸಿ ಸೇವೆಗಳನ್ನು ನಿಯಮಿತವಾಗಿ ಭಾರತದ ಗೌರವಾಧ್ಯಕ್ಷ, ಮಾನ್ಯ ಪ್ರಧಾನಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕ್ಯಾಬಿನೆಟ್ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗಳು, ಮುಖ್ಯ ಮಾಹಿತಿ ಆಯುಕ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಂತ್ರಿಗಳು ಮತ್ತು ದೇಶಾದ್ಯಂತ ಇಲಾಖೆ ಅಧಿಕಾರಿಗಳು ಬಳಸುತ್ತಿದ್ದಾರೆ .