ಸಾರ್ವಜನಿಕ ಪ್ರಕಟಣೆ ಅನುಸೂಚಿ
ಸಾರ್ವಜನಿಕ ಪ್ರಕಟಣೆ ಅನುಸೂಚಿಯು
ಜೆ.ಎನ್.ಎನ್.ಯು.ಆರ್.ಎಂ. ಅಡಿ ಒಂದು ಕಡ್ಡಾಯವಾದ ರಾಜ್ಯ ಮಟ್ಟದ ಸುಧಾರಣೆಗಳಲ್ಲೊಂದು. ಈ ಕಾಯಿದೆಯಡಿ, ನಾಗರೀಕ ಸ್ಥಳೀಯ ಸಂಸ್ಥೆಗಳು (ULB) ತಮ್ಮ ಕಾರ್ಯಾಚರಣೆಗಳ ಬಗ್ಗೆ ಸ್ವಯಂಪ್ರೇರಿತವಾಗಿ ಮಾಹಿತಿಯನ್ನು ಬಹಿರಂಗಪಡಿಸಬೇಕು; ಇವುಗಳೆಂದರೆ, ಕಾರ್ಯಾಚರಣೆ ಮತ್ತು ಹಣಕಾಸಿನ ಪ್ರಮಿತಿಗಳನ್ನೊಳಗೊಂಡ ವಾರ್ಷಿಕ ಸಾಧನೆಯ ನಿರೂಪಣೆಗಳು, ಮತು ವಿವಿಧ ಸೇವೆಗಳಿಗೆ ಸೇವಾಮಟ್ಟಗಳನ್ನು ಕಾಲಿಕವಾಗಿ ಸಾರ್ವಜನಿಕರಿಗೆ ತಿಳಿಸಬೇಕು.
ಪಿಡಿಎಸ್ ನ ಅಗತ್ಯ
- ಪುರಸಭಾ ಆಡಳಿತದ ಹಲವು ಅಂಶಗಳಿಗೆ
ಸಂಬಂಧಪಟ್ಟ ಮಾಹಿತಿಯ ಪ್ರಕಟಣೆಯ ಮೂಲಕ
ಪುರಸಭೆಯ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಮತ್ತು
ಹೊಣೆಗಾರಿಕೆಯನ್ನು ತರುವುದು ಈ ಸಾರ್ವಜನಿಕ ಪ್ರಕಟಣೆಯ
ಉದ್ದೇಶ. - ಎಲ್ಲಾ ಪಣಿಧಾರಿಗಳಿಗೆ ತ್ರೈಮಾಸಿಕ ಸಾಧನೆಯ
ಮಾಹಿತಿಯು ತಪ್ಪದೆ ತಲುಪಲು ಸಾರ್ವಜನಿಕ
ಅನಾವರಣ ಕಾಯಿದೆಯನ್ನು (PDL) ಜಾರಿಗೆ ತರುವುದು
ಜೆ.ಎನ್.ಎನ್.ಯು.ಆರ್.ಎಂ. ನ ದೂರದೃಷ್ಟಿಯಾಗಿದೆ - ನಾಗರಿಕರಿಗೆ ಮತ್ತು ಪಣಿಧಾರಿಗಳಿಗೆ ವಿವಿಧ ಪುರಸಭಾ ಸೇವೆಗಳ ಬಗ್ಗೆ ಸೂಕ್ತವಾದ ಹಣಕಾಸಿನ ಮತ್ತು ಕಾರ್ಯಾಚರಣೆಯ ಮಾಹಿತಿ ಒದಗಿಸುವುದು.
- ಪುರಸಭೆಯಿಂದ ಸಾರ್ವಜನಿಕ ಸರಕು ಮತ್ತು ಸೇವೆಗಳ ನೀಡಿಕೆಯಲ್ಲಿ ದಕ್ಷತೆ ಮತ್ತು ಸಮರಸತೆಯನ್ನು ಪ್ರೇರೇಪಿಸುವುದು.
- ಒಂದು ರಚನೆ, ನಿಯಮ ಮತ್ತು ಮಾನಕವಾದ ವಿಧಾನದಲ್ಲಿ ಮಾಹಿತಿಯ ಪ್ರಕಟಣೆಯ ಮೂಲಕ ಕಾಲಾಂತರದಲ್ಲಿ (ಒಂದು ನಿರ್ದಿಷ್ಟ ಯುಎಲ್ಬಿ ಯ) ಮತ್ತು ಸ್ಥಳಾಂತರದಲ್ಲಿ (ಯುಎಲ್ಬಿ ಗಳ ನಡುವೆ) ಹೋಲಿಕೆಯನ್ನು ಮಾಡುವುದು.
ಸಾರ್ವಜನಿಕ ಅನಾವರಣ ಕಾಯಿದೆಯ ಪ್ರಮುಖ ಉದ್ದೇಶಗಳು :
ಯುಎಲ್ಬಿ ಗಳ ಪಾತ್ರ
ಅಧಿಸೂಚನೆಯು ಹೇಳುವಂತೆ ULB ಗಳು ಮತ್ತು ಇತರ ಸಂಸ್ಥೆಗಳು ಕೆಳಕಂಡ ವಿಧಾನದಲ್ಲಿ ಸೇವಾ ಮಟ್ಟಗಳ ಬಗ್ಗೆ ಸ್ವಯಂಪ್ರೇರಿತವಾಗಿ ಮಾಹಿತಿಯನ್ನು ಪ್ರಕಟಿಸತಕ್ಕದ್ದು
➣ ಹೆಚ್ಚು ಮಾಹಿತಿಯನ್ನು ಪಡೆಯಲು ಸಹಾಯಕವಾಗುವಂತೆ ಕಛೇರಿಯ ವಿಳಾಸ, ಜಾಲತಾಣ ಮತ್ತು/ಅಥವಾ ಇ-ಮೇಲ್ ಮತ್ತು ಇತರ ಸಂಪರ್ಕ ವಿವರಗಳೊಂದಿಗೆ, ಜಿಲ್ಲೆಯಲ್ಲಿ ಪ್ರಚಾರವಾಗುವ ಕನಿಷ್ಟ ಒಂದು ದಿನಪತ್ರಿಕೆಯಲ್ಲಿ ಮಾಹಿತಿಯ ಸಾರಾಂಶವನ್ನು ಪ್ರಕಟಿಸಬೇಕು
➣ ಸ್ಥಳೀಯ ಪ್ರಾಧಿಕಾರದ ಜಾಲತಾಣದ ಬಗ್ಗೆ ಎಲ್ಲಾ ಮಾಹಿತಿಯ ಪೂರ್ಣ ಪ್ರಕಟಣೆ
➣ ಸ್ಥಳೀಯ ಪ್ರಾಧಿಕಾರದ ಸೂಚನಾ ಫಲಕ
➣ ವಾರ್ಡ್ ಕಛೇರಿಗಳಿದ್ದಲ್ಲಿ, ಅದರ ಸೂಚನಾ ಫಲಕ; ಅಧಿಸೂಚನೆಯ ಅನುಸೂಚಿಯು ULB ಗಳು ಪ್ರಕಟಿಸಬೇಕಾದ ಮಾಹಿತಿಯ ವಿವರಗಳು, ಪ್ರಕಟಣೆಯ ಆವರ್ತನ (ಅರ್ಧ ವಾರ್ಷಿಕ, ವಾರ್ಷಿಕ ಇತ್ಯಾದಿ), ಪ್ರಕಟಣೆಯ ಮಟ್ಟ (ವಾರ್ಡ್, ನಗರ) ಮತ್ತು ಯಾವ ಅವಧಿಗೆ ಮಾಹಿತಿಯನ್ನು ಪ್ರಕಟಿಸಬೇಕು (ಒಂದು ವರ್ಷ ಇತ್ಯಾದಿ) ಎಂಬುದರ ವಿವರಗಳನ್ನು ನೀಡುತ್ತದೆ.