ಕಾನೂನು ವಿಭಾಗದ ಕಾರ್ಯವ್ಯಾಪ್ತಿಗಳು
- ಆಂತರಿಕ ಇಲಾಖೆಗಳಿಂದ ಕಾನೂನು ಅಭಿಪ್ರಾಯ ಕೋರಿ ಬರುವ ಕಡತಗಳನ್ನು ಕಡತಗಳಲ್ಲಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಕಾನೂನು ಅಭಿಪ್ರಾಯ ನೀಡುವುದು
- ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಯು ಕೆಎಂಸಿ ಕಾಯ್ದೆ 1976 ರಲ್ಲಿ ನಡೆಯುತ್ತಿದ್ದು, ಕರ್ತವ್ಯಗಳನ್ನು, ಕಾರ್ಯಗಳನ್ನು ನಿರ್ವಹಿಸುತ್ತಿದೆ. ನಿಯಮಗಳ ವಿರುದ್ಧವಾಗಿ ನಡೆಯುವ ಎಲ್ಲ ಕ್ರಿಯೆಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ. ನಗರಪಾಲಿಕೆ ಸಿಬ್ಬಂದಿ ವರ್ಗಕ್ಕೆ ಕೆಸಿಎಸ್ಆರ್ ಸಿಸಿಎ ನಿಯಮಗಳು ಅನ್ವಯಿಸುವುದರಿಂದ ಕ್ರಮ ಜರುಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಕೆಳಗಿನ ವಿಷಯಗಳಲ್ಲಿ ನ್ಯಾಯಾಲಯಗಳಲ್ಲಿ ಸಾರ್ವಜನಿಕರು ಪ್ರಕರಣಗಳನ್ನು ದಾಖಲು ಮಾಡಿರುತ್ತಾರೆ.
- ನಿಯಮಬಾಹಿರವಾಗಿ ನಿರ್ಮಾಣಮಾಡುವ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸುವ ಪ್ರಕರಣಗಳು
- ಶಿಥಿಲವಾದ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸುವ ಪ್ರಕರಣಗಳು
- ನಿಗದಿಪಡಿಸುವಾಗ ಅತೃಪ್ತರಾದ ಕಟ್ಟಡಗಳ ಮಾಲೀಕರು ಮಾಡುವ ಪ್ರಕರಣಗಳು
- ನಗರಪಾಲಿಕೆಯ ಸಾರ್ವಜನಿಕ ಸ್ವತ್ತುಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳು
- ನಗರ ಪಾಲಿಕೆಯನ್ನು ಪಾರ್ಟಿ ಮಾಡಿ ನಾಗರಿಕರು ಪರದಾಡುವ ಪ್ರಕರಣಗಳು
- ಅನಧಿಕೃತ ಜಾಹಿರಾತು ಫಲಕಗಳನ್ನು ಪ್ರಕಟಿಸುವ ಪ್ರಕರಣಗಳು
- ಮಾರುಕಟ್ಟೆಯಲ್ಲಿನ ಮಳಿಗೆಗೆ ಬಾಡಿಗೆ ನಿಗದಿ ಪಡಿಸುವ ಹಾಗೂ ಮಂಜೂರಾತಿ ಮಾಡುವ ವಿಚಾರಗಳ ಪ್ರಕರಣಗಳು
- ಸಿಬ್ಬಂದಿ ವರ್ಗದವರ ಶಿಸ್ತುಪಾಲನೆ ಸೇವಾ ಹಿರಿತನ ವಿಚಾರಗಳಲ್ಲಿ ಪ್ರಕರಣಗಳು
- ನಗರಪಾಲಿಕೆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ರೂಪಿಸಬಹುದಾದ ನಿಯಮಗಳು ಕಸವಿಲೇವಾರಿ ವಿಸ್ತರಣೆ ಪ್ರಕ್ರಿಯೆ ಇತ್ಯಾದಿ ವಿಷಯಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮುಂದೆ ಮಾಡಬಹುದಾದ ಪ್ರಕರಣಗಳು
- ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪ್ರಕರಣಗಳು
- ಮಾನವ ಹಕ್ಕು ಕಾಯ್ದೆಯಡಿಯಲ್ಲಿ ಪ್ರಕರಣಗಳು
- ಪಾಲಿಕೆಯ ವಿರುದ್ಧ ಆಡಲಾಗುವ ಪ್ರಕರಣಗಳಲ್ಲಿ ಕಾನೂನು ಕೋಶದ ಮುಖ್ಯಸ್ಥರ ಆದೇಶದನ್ವಯ ವಲಯವಾರು ವಕೀಲರು ವಿಷಯಾಧಾರಿತ ಮೇಲೆ ಸಂಬಂಧಪಟ್ಟ ಇಲಾಖೆಗಳಿಂದ ಟೀಕೆ-ಟಿಪ್ಪಣಿಗಳನ್ನು ದಾಖಲೆಗಳ ಪ್ರತಿಗಳನ್ನು ಅವುಗಳನ್ನು ಪರಿಶೀಲಿಸಿ ವಕೀಲರ ಮುಖಾಂತರ ನ್ಯಾಯಾಲಯದ ಮುಂದೆ ನಿಯಮಾನುಸಾರ ಪ್ರತಿವಾದ ಮಂಡಿಸುವುದು ಹಾಗೂ ಮುಖಾಂತರ ತೆಗೆದುಕೊಳ್ಳುವುದು ಮತ್ತು ಪ್ರಕರಣಗಳ ಇತ್ಯರ್ಥಕ್ಕಾಗಿ ಕ್ರಮ ತೆಗೆದುಕೊಳ್ಳುವುದು
- ನ್ಯಾಯಾಲಯಗಳಲ್ಲಿ ಪಾಲಿಕೆಯ ಪರವಾಗಿ ಇತ್ಯರ್ಥಗೊಂಡ ಕಾರಣಗಳಲ್ಲಿನ ತೀರ್ಪುಗಳನ್ನು ಆಯಾ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ನ್ಯಾಯಾಲಯದ ಆದೇಶಗಳನ್ನು ಪಾಲಿಸುವಲ್ಲಿ ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡುವುದು
- ನ್ಯಾಯಾಲಯಗಳಲ್ಲಿ ಪಾಲಿಕೆಗೆ ನಿರ್ದೇಶನ ನೀಡಿದ ಪ್ರಕರಣಗಳಲ್ಲಿ ನಿಗಾವಹಿಸಿ ನಿಗದಿತ ಅವಧಿಯೊಳಗೆ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಹಾಗೂ ನ್ಯಾಯಾಲಯಗಳು ನೀಡುವ ಆದೇಶಗಳನ್ನು ಪಾಲಿಸುವಲ್ಲಿ ಜಾಗ್ರತೆಯಾಗಿ ಕಾರ್ಯನಿರ್ವಹಿಸುವಂತೆ ಆಯಾ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡುವುದು
- ಮುಖ್ಯವಾಗಿ ನಗರಪಾಲಿಕೆ ಸ್ವತ್ತುಗಳ ಬಗ್ಗೆ ಅತಿ ಮುತುವರ್ಜಿವಹಿಸಿ ನಗರಪಾಲಿಕೆ ಸ್ವತ್ತುಗಳನ್ನು ಸಂರಕ್ಷಿಸುವಲ್ಲಿ ವಿಶೇಷ ಆಸಕ್ತಿ ವಹಿಸುವುದು
- ಮೇಲ್ಮನವಿ ಸಲ್ಲಿಸುವುದರೊಂದಿಗೆ ನ್ಯಾಯಾಲಯದಿಂದ ನ್ಯಾಯಾಲಯ ನಿಂದನೆ ಪ್ರಕರಣಗಳು ಆಗದಂತೆ ನೋಡಿಕೊಳ್ಳುವುದು
- ನಗರಪಾಲಿಕೆ ಸ್ವತ್ತುಗಳಿಗೆ ಸಂಬಂಧಪಟ್ಟಂತೆ ಸರ್ಕಾರದ ವಿವಿಧ ಇಲಾಖೆಗಳಿಂದ ಲಭ್ಯವಿರುವ ದಾಖಲೆಗಳು ಪ್ರತಿಗಳನ್ನು ನಗರಪಾಲಿಕೆ ಆಸಕ್ತಿಯನ್ನು ಕಾಪಾಡಲು ಸಮರ್ಥವಾಗಿ ನ್ಯಾಯಾಲಯಗಳ ಮುಂದೆ ಪ್ರತಿವಾದ ಮಂಡಿಸುವುದು
- ನ್ಯಾಯಾಲಯಗಳು ನೀಡುವ ಆದೇಶಗಳನ್ನು ಆಗೋ ತಿಳುವಳಿಕೆಗಳನ್ನು ನಗರಪಾಲಿಕೆಯ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ಸುತ್ತೋಲೆ ಮೂಲಕ ತಿಳಿಯಪಡಿಸುವುದು ಹಾಗೂ ಮುಂದೆ ಸಂಭವಿಸಬಹುದಾದ ತಪ್ಪುಗಳನ್ನು ತಡೆಗಟ್ಟುವುದು
- ಅಲ್ಲದೆ ಪೂಜ್ಯ ಮಹಾಪೌರರು ಹಾಗೂ ಮಾನ್ಯ ಆಯುಕ್ತರು ಅಪರ ಆಯುಕ್ತರು ಸೂಚಿಸುವ ಕೆಲಸಕಾರ್ಯಗಳನ್ನು ನಿರ್ವಹಿಸುವುದು