ಶಿಕ್ಷಣ ಇಲಾಖೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ವಿವಿಧ ಇಲಾಖೆಗಳ ಮೂಲಕ ಬೆಂಗಳೂರಿನ ಜನರ ಜೀವನದ ಸುಧಾರಣೆಗೆ ಶ್ರಮಿಸುತ್ತಿದೆ. ಅಂತಹ ಇಲಾಖೆಗಳಲ್ಲಿ ಶಿಕ್ಷಣ ಇಲಾಖೆ ಕೂಡ ಒಂದು. 159 ಶಾಲೆಗಳು ಮತ್ತು ಕಾಲೇಜುಗಳನ್ನು ಬಿಬಿಎಂಪಿ ಸ್ಥಾಪಿಸಿ ನಿರ್ವಹಿಸುತ್ತಿವೆ. ನರ್ಸರಿ ಶಾಲೆಗಳಿಂದ ಹಿಡಿದು ಸ್ನಾತಕೋತ್ತರ ಕೇಂದ್ರಗಳವರೆಗೆ ಒಟ್ಟು 17730 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ
-
ಶಾಲೆಗಳು ಮತ್ತು ಕಾಲೇಜುಗಳಲ್ಲಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ
24108 - ಶಾಲೆಗಳ ಸಂಖ್ಯೆ 142
- ಕಾಲೇಜುಗಳ ಸಂಖ್ಯೆ 17
-
ಪಿಜಿ ಕೇಂದ್ರಗಳಲ್ಲಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ
71 - ಪಿಜಿ ಕೇಂದ್ರಗಳು 2

ಉದ್ದಿಷ್ಟಕಾರ್ಯ
ಆರಂಭದಲ್ಲಿ ಬೆಂಗಳೂರು ಮಹಾನಗರ ನಿಗಮದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರಾರಂಭಿಸಲಾಯಿತು, ನಂತರದಲ್ಲಿ ವಿದ್ಯಾಭ್ಯಾಸದ ಸೌಲಭ್ಯಗಳನ್ನು ಸಮಾಜದ ಎಲ್ಲಾ ವರ್ಗದವರಿಗೂ ವಿಸ್ತರಿಸಲಾಯಿತು. ಇಂದು ಅಂತಹ ಎಲ್ಲಾ ಸಂಸ್ಥೆಗಳು ಮಕ್ಕಳಿಗೆ ಅನೇಕ ಸೌಕರ್ಯಗಳನ್ನು ಒದಗಿಸುತ್ತಿವೆ, ಅವುಗಳಲ್ಲಿ ಕೆಲವು
ಉಚಿತ ಪಠ್ಯ ಪುಸ್ತಕಗಳು ಮತ್ತು ನೋಟ್ಬುಕ್ಗಳನ್ನು ಒದಗಿಸುವುದು.

ಆಹಾರ ಯೋಜನೆಯ ಭಾಗವಾಗಿ, ಶಾಲಾ ಸಮಯದಲ್ಲಿ ಹಾಲು ಪೂರೈಸುವುದು

ಆಹಾರ ಯೋಜನೆಯಡಿಯಲ್ಲಿ ಮಧ್ಯಾಹ್ನ ಊಟದ ಸೌಲಭ್ಯ

ಉಚಿತ ಶಿಕ್ಷಣದ ಜೊತೆಗೆ, ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಒದಗಿಸುವುದು.

ವಿದ್ಯಾರ್ಥಿಗಳಿಗೆ ಪಾದರಕ್ಷೆಗಳನ್ನು ಮತ್ತು ಸಾಕ್ಸ್ ಗಳನ್ನು ಒದಗಿಸುವುದು.

ಉಚಿತ ಶಿಕ್ಷಣವನ್ನು ನೀಡುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸುವುದು.
