ಆಡಳಿತ ವಿಭಾಗದ ಮುಖ್ಯ ಕಾರ್ಯಗಳು ಸಿಬ್ಬಂದಿ ನಿರ್ವಹಣೆ, ಸಂಸತ್ತಿನ ಮತ್ತು ಇತರ ಚುನಾವಣೆಗಳ ನಡವಳಿಕೆ, ನ್ಯಾಯಾಲಯದ ಪ್ರಕರಣಗಳ ಮೇಲ್ವಿಚಾರಣೆ, ಎಲ್ಲಾ ಸ್ಥಿರ ಆಸ್ತಿಗಳ ನಿರ್ವಹಣೆ, ಆಸ್ತಿಗಳ ಗುತ್ತಿಗೆ ಪಡೆಯುವುದು ಮತ್ತು ಮೇಲ್ವಿಚಾರಣೆ, ಬಾಡಿಗೆ ಸಂಗ್ರಹ ಮತ್ತು ಇನ್ನೂ ಅನೇಕ ಚುನಾವಣಾ ಸಂಬಂಧಿತ ವಿಷಯಗಳು. ಸಾಮಾನ್ಯ ಆಡಳಿತ ಇಲಾಖೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸ್ಥಾಪನೆ ಮತ್ತು ಆಡಳಿತಾತ್ಮಕ ವಿಷಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ
ಇಲಾಖೆಯ ಪ್ರಮುಖ ಕಾರ್ಯಗಳು
- ನಾಗರಿಕರಿಂದ , ರಾಜಕಾರಣಿಗಳಿಂದ , ಸರ್ಕಾರದಿಂದ ಮತ್ತು ವಿವಿಧ ಇಲಾಖೆಗಳಿಂದ ಬಂದಂತಹ ಪತ್ರಗಳನ್ನು ಆಯಾ ಇಲಾಖೆಗಳಿಗೆ ಮತ್ತು ಅದಕ್ಕೆ ಸಂಬಂಧ ಪಟ್ಟಿರುವ ಮುಖ್ಯಸ್ಥರಿಗೆ ತಲುಪಿಸುವ ಅಂತದ್ದು
- ನೌಕರರ ಸೇವಾ ದಾಖಲೆಗಳನ್ನು ನಿರ್ವಹಣೆ ಮಾಡುವುದು
- ವಾರ್ಷಿಕ ಸಂಬಳದ ಹೆಚ್ಚಳ ಹಾಗೂ ಅವರ ವಾರ್ಷಿಕ ರಜೆಗಳ ಬಗ್ಗೆ ಅನುಮೋದನೆ ನೀಡುವುದು ಅದರ ದೃಷ್ಟಿಕೋನದಲ್ಲಿ ಗಮನಿಸುವುದು
- ಅಗತ್ಯವಿರುವಾಗ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವಂತಹ ನೌಕರರ ಮೇಲೆ ಶಿಸ್ತು ಕ್ರಮವನ್ನು ತೆಗೆದುಕೊಳ್ಳುವುದು
- ಇಲಾಖೆಯ ದೃಷ್ಟಿಯಿಂದ ಸರ್ಕಾರದ ಜೊತೆಗೆ ಪ್ರಮುಖ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಸಂವಾದ ಮಾಡುವುದು
- ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವಂತಹ ಎಲ್ಲಾ ನೌಕರರ ಹಾಗೂ ಅಧಿಕಾರಿಗಳ ಬಡ್ತಿಯ ವಿಚಾರದಲ್ಲಿ ಗಮನಿಸುವುದು
- ಪಾಲಿಕೆಯ ಎಲ್ಲ ಇಲಾಖೆಗಳಲ್ಲೂ ಸಾಮಾನ್ಯವಾಗಿ ಕೆಲಸದ ಹಂಚಿಕೆಯ ದೃಷ್ಟಿಯಲ್ಲಿ ಕೆಲಸ ಮಾಡುವುದು